ನವದೆಹಲಿ: ‘ಪ್ರಕರಣಗಳ ಸಂಬಂಧ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ದಾಖಲಿಸುವುದು ವಿಳಂಬವಾಗಿದೆ ಎಂಬ ಕಾರಣಕ್ಕೇ ಆ ಪುರಾವೆಯನ್ನು ಕಡೆಗಣಿಸಲಾಗದು‘ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಮೂಲಕ ಕೊಲೆ ಪ್ರಕರಣದಲ್ಲಿ ಅಪರಾಧ ಸಾಬೀತು ತೀರ್ಮಾನವನ್ನು ಪ್ರಶ್ನಿಸಿ ನಾಲ್ವರು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿತು.

ನ್ಯಾಯಮೂರ್ತಿಗಳಾದ ಯು.ಯು.ಲಲಿತ್ ಅವರ ನೇತೃತ್ವದ ಪೀಠವು, ‘ಲಭ್ಯವಿರುವ ದಾಖಲೆಗಳು ಆರೋಪಿತ ವ್ಯಕ್ತಿಗಳು ಭೀತಿ ನಿರ್ಮಾಣ ಮಾಡಿದ್ದರು ಎಂಬುದನ್ನು ಪುಷ್ಟಿಕರಿಸುತ್ತವೆ‘ ಎಂದು ಅಭಿಪ್ರಾಯಪಟ್ಟಿತು.

ಪ್ರತ್ಯಕ್ಷದರ್ಶಿಗಳ ಹೇಳಿಕೆಯ ದಾಖಲು ವಿಳಂಬವಾಗಿದೆ ಎಂಬುದು ನಿಜ. ಈ ಕಾರಣಕ್ಕೆ ಸಾಕ್ಷ್ಯ ಕಡೆಗಣಿಸಲಾಗದು ಎಂದು ಹೇಳಿತು. ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್, ಬೇಲಾ ಎಂ.ತ್ರಿವೇದಿ ಪೀಠದ ಇತರ ಸದಸ್ಯರು.

ಸಾಕ್ಷಿಗಳು ಭೀತಿಗೊಂಡು ಹೇಳಿಕೆ ನೀಡಲು ಕೆಲ ಸಮಯ ಮುಂದೆ ಬರದಿದ್ದರೆ, ಆಗ ಹೇಳಿಕೆ ವಿಳಂಬವಾಗಲು ಕಾರಣ ಏನೆಂಬುದನ್ನು ವಿವರಿಸಬೇಕು ಎಂದು ಪೀಠ ಅಕ್ಟೋಬರ್ 7ರ ಆದೇಶದಲ್ಲಿ ಹೇಳಿದೆ.

ಕೊಲೆ ಪ್ರಕರಣದಲ್ಲಿ ಸೆಷನ್ಸ್ ಕೋರ್ಟ್ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಈ ಹಿಂದೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಕಲ್ಕತ್ತ ಹೈಕೋರ್ಟ್ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.