ಬುಲ್ಲಿ ಬಾಯಿ ಆ್ಯಪ್‌ನ ನಂತರ ಮುಸ್ಲಿಂ ಮಹಿಳೆಯರ ತೇಜೋವಧೆಗೆ ಮಾತಿನ ಕೂಟ ಎಂದು ಜನಪ್ರಿಯವಾದ ಕ್ಲಬ್‌ಹೌಸ್ ಅನ್ನು ವೇದಿಕೆ ಮಾಡಿಕೊಳ್ಳಲಾಗಿದೆ. ಇಲ್ಲಿ ಮಹಿಳೆಯರ ಅವಹೇಳನಕಾರಿ ಚರ್ಚಾಕೂಟವೊಂದು ನಡೆದಿದೆ. ಈ ಸಂಬಂಧ ಚರ್ಚಾಕೂಟವನ್ನು ಆಯೋಜಿಸಿದ ಸಂಘಟಕರ ವಿವರ ಕೋರಿ ದೆಹಲಿ ಪೊಲೀಸರು ಕ್ಲಬ್‌ಹೌಸ್‌ಗೆ ಬುಧವಾರ ಪತ್ರ ಬರೆದಿದ್ದಾರೆ.