ಜಗತ್ತಿನ ಬಡರಾಷ್ಟ್ರಗಳನ್ನು ಹಲವು ದಶಕಗಳಿಂದ ಕಾಡುತ್ತಿರುವ ಮಲೇರಿಯಾ ಮಹಾಮಾರಿ ವಿರುದ್ಧ ಬಳಸಬಹುದಾದ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಇದೇ ಮೊದಲ ಬಾರಿಗೆ ಅನುಮೋದನೆ ನೀಡಿದೆ. ಗ್ಲಾಕ್ಸೋಸ್ಮಿತ್‌ಕ್ಲಿನ್ ಕಂಪನಿ ಅಭಿವೃದ್ಧಿಪಡಿಸಿ, ತಯಾರಿಸಲಿರುವ ಮಾಸ್ಕ್ವಿರಿಕ್ಸ್ ಲಸಿಕೆಯನ್ನು ಮಲೇರಿಯಾ ತಡೆಗಟ್ಟಲು ತುರ್ತು ಸಂದರ್ಭದಲ್ಲಿ ಬಳಸಲು ಆರೋಗ್ಯ ಸಂಸ್ಥೆ ಅಕ್ಟೋಬರ್ ಮೊದಲ ವಾರದಲ್ಲಿ ಅನುಮೋದನೆ ನೀಡಿದೆ.