ಇದೊಂದು ರೀತಿ ಕಳ್ಳ ಪೊಲೀಸ್ ಆಟ. ಮೊದಲರ್ಧ ದುರುಳರ ಮೆರೆದಾಟ; ದ್ವಿತಿಯಾರ್ಧ ಪೊಲೀಸರ ಆಟ ಮತ್ತು ಕಳ್ಳಾಟ. ಕಥೆ ಇಲ್ಲಿ ನೆಪಕ್ಕೆ ಮಾತ್ರ; ‘ಕಥೆ ಮುಗಿಸುವುದೇ’ ಇದರ ಸೂತ್ರ. ತಮ್ಮ ಮೊದಲ ನಿರ್ದೇಶನದಲ್ಲಿ ನಟ ದುನಿಯಾ ವಿಜಯ್ ತಮ್ಮ ನಟನೆಯ ಹಿಂದಿನೆಲ್ಲ ಸಿನಿಮಾಗಳಿಗಿಂತ ಸಾಕಷ್ಟು ಮುಂದಕ್ಕೆ ಹೋಗಿದ್ದಾರೆ. ಆದರೆ ಹಾಗೆ ಸಾಗಿದ ದಾರಿ ಹೇಗಿದೆಯೆಂದರೆ ಅಲ್ಲಿಂದ ತಿರುಗಿ ಬರಲು ಅವರು ನಡೆಸುವ ಪ್ರಯತ್ನಗಳೂ ಮಸುಕು ಎನಿಸುವಷ್ಟು!