×
ADVERTISEMENT
ಈ ಕ್ಷಣ :
ADVERTISEMENT

ವೆಬ್‌ ಸೀರೀಸ್‌: 'ಬೃಂದಾ’ ಆಗಿ ಬಂದ ತ್ರಿಷಾ ಕೃಷ್ಣನ್‌

Published : 16 ಅಕ್ಟೋಬರ್ 2021, 12:37 IST
ಫಾಲೋ ಮಾಡಿ
Comments

ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್‌ ಮೊದಲ ಬಾರಿಗೆ ವೆಬ್‌ ಸೀರೀಸ್‌ನಲ್ಲಿ ನಟಿಸುತ್ತಿದ್ದಾರೆ.

ಬೃಂದಾ ಎಂಬ ವೆಬ್‌ ಸೀರೀಸ್‌ನಲ್ಲಿ ತ್ರಿಷಾ ನಟಿಸುತ್ತಿದ್ದು ಇದು ಸೋನಿ ಲಿವ್‌ ಒಟಿಟಿಯಲ್ಲಿ ಪ್ರಸಾರವಾಗಲಿದೆ. ವಿಜಯದಶಮಿ ಹಬ್ಬದ ದಿನ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿದೆ ಎಂದು ಟಾಲಿವುಡ್‌ ಮೂಲಗಳು ತಿಳಿಸಿವೆ.

ಈ ವೆಬ್‌ ಸೀರೀಸ್‌ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಪ್ರಸಾರವಾಗಲಿದೆ. ತೆಲುಗಿನ ಕಾರ್ಯಕಾರಿ ನಿರ್ಮಾಪಕ ಅವಿನಾಶ್‌ ಕೊಲ್ಲ ಇದನ್ನು ನಿರ್ಮಾಣ ಮಾಡುತ್ತಿದ್ದಾರೆ. 

ಸೂರ್ಯ ವೆಂಗಲ ಕಥೆಗೆ ಜಯ ಕೃಷ್ಣ ಸಂಭಾಷಣೆ ಬರೆದಿದ್ದಾರೆ. ಶಕ್ತಿ ಕಾಂತ್ ಕಾರ್ತಿಕ್ ಸಂಗೀತ ಸಂಯೋಜನೆ ಮಾಡಿದ್ದು ದಿನೇಶ್ ಕೆ ಬಾಬು ಛಾಯಾಗ್ರಾಹಕರಾಗಿದ್ದಾರೆ. 

ತ್ರಿಷಾ ಸೇರಿದಂತೆ ಸಾಯಿ ಕುಮಾರ್, ಅಮಾನಿ, ಇಂದ್ರಜಿತ್ ಸುಕುಮಾರನ್, ರವೀಂದ್ರ ವಿಜಯ್ ಮತ್ತು ಆನಂದ್ ಸಾಮಿ ನಟಿಸುತ್ತಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್‌ ಮೊದಲ ಬಾರಿಗೆ ವೆಬ್‌ ಸೀರೀಸ್‌ನಲ್ಲಿ ನಟಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT