ಕನ್ನಡ ಚಿತ್ರರಂಗದಲ್ಲಿ ಅನೇಕ ಸೂಪರ್ ಡ್ಯೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ ಖ್ಯಾತಿ ದೊರೈ - ಭಗವಾನ್ ಅವರದ್ದು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಕೆ.ಭಗವಾನ್ ಇಂದು ವಿಧಿವಶರಾಗಿದ್ದಾರೆ. ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಎಸ್.ಕೆ.ಭಗವಾನ್ ಚಿರನಿದ್ರೆಗೆ ಜಾರಿದ್ದಾರೆ. ಎಸ್.ಕೆ.ಭಗವಾನ್ ನಿಧನದಿಂದ ಕನ್ನಡ ಚಿತ್ರರಂಗದ ಹಿರಿಯ ಕೊಂಡಿ ಕಳಚಿದಂತಾಗಿದೆ. ಎಸ್.ಕೆ.ಭಗವಾನ್ ನಿಧನಕ್ಕೆ ಅನಂತ್ ನಾಗ್ ಕಂಬನಿ ಮಿಡಿದಿದ್ದಾರೆ.

‘’ದುರ್ದೈವ.. ಭಗವಾನ್ ಅವರು ನಿರ್ಗಮಿಸಿದ್ದಾರೆ. ಎಂತಹ ಸಾಧನೆ ಮಾಡಿ, ಪೂರ್ಣ ಜೀವನ ಜೀವಿಸಿ ನಮ್ಮನ್ನೆಲ್ಲಾ ಅಗಲಿದ್ದಾರೆ. ನನಗಂತೂ ಒಂದು ಯುಗವೇ ಕಳೆದಂತಹ ಅನುಭವ. ಯಾಕಂದ್ರೆ, 1974 ರಿಂದ ಸತತ 50 ವರ್ಷಗಳ ಕಾಲ ಅವರೊಂದಿಗೆ ನನ್ನ ಬಾಂಧವ್ಯವಿತ್ತು. ಇವತ್ತೇ ಅವರ ಜನ್ಮದಿನ ಕೂಡ. ಜನ್ಮದಿನದಂದೇ ನಿಧನರಾಗಿದ್ದಾರೆ. ಪರಮಾತ್ಮನ ಕೈವಾಡವಿಲ್ಲದೆ ಇದು ಸಾಧ್ಯವಿಲ್ಲ. 2000ನೇ ಇಸವಿಯ ಫೆಬ್ರವರಿ 20 ರಂದೇ ಭಗವಾನ್ ಜೊತೆಗಿದ್ದ ದೊರೈರಾಜ್ ಅವರೂ ಕೂಡ ನಿರ್ಗಮಿಸಿದರು. ಇದೂ ಎಂತಹ ಕಾಕತಾಳೀಯ.!’’

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.