×
ADVERTISEMENT
ಈ ಕ್ಷಣ :
ADVERTISEMENT

'ಮೈಸಮ್ಮ' ದೇವಿಗೆ ವಿಸ್ಕಿ ನೈವೇದ್ಯ ಮಾಡಿದ ರಾಮ್‌ ಗೋಪಾಲ್‌ ವರ್ಮಾ

Published : 13 ಅಕ್ಟೋಬರ್ 2021, 6:16 IST
ಫಾಲೋ ಮಾಡಿ
Comments

ಇತ್ತೀಚಿನ ದಿನಗಳಲ್ಲಿ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ತಮ್ಮ ಸಿನಿಮಾಗಳಿಗಿಂತ ವಿವಾದಗಳಿಂದಲೇ ಹೆಚ್ಚು ಖ್ಯಾತಿಯಾಗುತ್ತಿದ್ದಾರೆ. ಇದೀಗ ತೆಲಂಗಾಣದ ವಾರಂಗಲ್‌ನ 'ಮೈಸಮ್ಮ' ದೇವಿಗೆ ವಿಸ್ಕಿ ನೈವೇದ್ಯ ಮಾಡುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ. 

ಆಂಧ್ರ, ತೆಲಂಗಾಣ ಹಾಗೂ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ದೇವರಿಗೆ ಹೆಂಡ, ವಿಸ್ಕಿ ಸಮರ್ಪಣೆ ಮಾಡುವುದು ಸಂಪ್ರದಾಯವಾಗಿದೆ. ಆಂಧ್ರ ಮತ್ತು ತೆಲಂಗಾಣದ ಜನಪ್ರಿಯ ಶಕ್ತಿ ದೇವತೆ ಮೈಸಮ್ಮ ದೇವಿಗೆ ಹೆಂಡ ನೈವೇದ್ಯ ಮಾಡುವುದು ಕೂಡ ಪದ್ಧತಿಯಾಗಿ ಬೆಳೆದು ಬಂದಿದೆ.

ತಾವು ನಿರ್ದೇಶಿಸುತ್ತಿರುವ ಹೊಸ ಸಿನಿಮಾ 'ಕೊಂಡ'ದ ಸಮಾರಂಭದಲ್ಲಿ ಭಾಗವಹಿಸಲು ರಾಮ್ ಗೋಪಾಲ್ ವರ್ಮಾ ವರಾಂಗಲ್‌ಗೆ ತೆರಳಿದ್ದು, ಅಲ್ಲಿ  ಮೈಸಮ್ಮ ದೇವಿಗೆ ಪೂಜೆ ಸಲ್ಲಿಸಿ, ವಿಸ್ಕಿಯನ್ನು ನೈವೇದ್ಯ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್‌ ಕೂಡ ಮಾಡಿದ್ದಾರೆ.

’ನಾನು ವೊಡ್ಕಾ ಮಾತ್ರ ಕುಡಿಯುತ್ತೇನೆ, ಮೈಸಮ್ಮ ದೇವಿಗೆ ವಿಸ್ಕಿ ಕುಡಿಸಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ವರ್ಮಾ ಅವರಿಗೆ ಹಿಂದೂ ದೇವತೆಗಳ ಬಗ್ಗೆ ಗೌರವ ಇಲ್ಲ ಎಂದು ಟೀಕಿಸಿದ್ದಾರೆ. ಇನ್ನು ಕೆಲವರು ಕಬಾಬ್ ಕೂಡ ತಿನ್ನಿಸಬೇಕಿತ್ತು ಎಂದು ಹಾಸ್ಯ ಮಾಡಿದ್ದಾರೆ. 

ಸದ್ಯ ವರ್ಮಾ ’ಕೊಂಡ’ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ಭೂ ಮಾಲೀಕರ ವಿರುದ್ಧ ತಿರುಗಿ ಬಿದ್ದು, ನಕ್ಸಲ್‌ ಚಳವಳಿಯಲ್ಲಿ ತೊಡಗಿಕೊಂಡಿದ್ದ ಕೊಂಡ ಮುರಳಿ, ಕೊಂಡ ಸುರೇಖ ಜೀವನ ಆಧರಿಸಿದ ಸಿನಿಮಾ. ಸದ್ಯ ಇವರು ರಾಜಕೀಯದಲ್ಲಿ ಇದ್ದಾರೆ. ಈ ಸಿನಿಮಾ ತೆಲಂಗಾಣದ ರಕ್ತ ಚರಿತ್ರೆ ಎಂದು ವರ್ಮಾ ಹೇಳಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ತಮ್ಮ ಸಿನಿಮಾಗಳಿಗಿಂತ ವಿವಾದಗಳಿಂದಲೇ ಹೆಚ್ಚು ಖ್ಯಾತಿಯಾಗುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT