ಕಡಲತೀರದ ಭಾರ್ಗವ... ಇದು ಡಾ.ಕೆ.ಶಿವರಾಮ ಕಾರಂತ ಅವರಿಗೆ ಜನರಿಟ್ಟ ಅಭಿಮಾನದ ಹೆಸರು. ಈಗ ಅದೇ ಹೆಸರಿನಲ್ಲಿ ಚಿತ್ರವೊಂದು ಸಿದ್ಧವಾಗಿದೆ. ಹಾಗೆಂದು ಇದೇನು ಶಿವರಾಮ ಕಾರಂತರ ಚಿತ್ರವಲ್ಲ. ಚಿತ್ರದ ನಾಯಕನ ಹೆಸರು ಭಾರ್ಗವ ಎಂದು. ಅವನು ಕಡಲ ತೀರದ ನಿವಾಸಿ ಎಂದಿದೆ ಚಿತ್ರತಂಡ.

ಏವಕಲ ಸ್ಟುಡಿಯೋ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ವರುಣ್ ರಾಜು ಪಟೇಲ್ ಹಾಗೂ ಭರತ್‌ಗೌಡ ಈ ಚಿತ್ರದ ನಿರ್ಮಾಪಕರು. ವಿಜಯಂ ವಜ್ರ ವೆಂಚರ್ಸ್ ಸಹ ನಿರ್ಮಾಣ ಈ ಚಿತ್ರಕ್ಕಿದೆ. ಪೂರ್ವಭಾವಿಯಾಗಿ ಅ. 18ರಂದು ಟೀಸರ್ ಬಿಡುಗಡೆ ಆಗಲಿದೆ.

ನಿರ್ಮಾಪಕರಾದ ಭರತ್ ಗೌಡ ಹಾಗೂ ವರುಣ್ ರಾಜು ಪಟೇಲ್ ಈ ಚಿತ್ರದ ನಾಯಕರಾಗಿ ಅಭಿನಯಿಸಿದ್ದಾರೆ. ಶ್ರುತಿ ಪ್ರಕಾಶ್ ಈ ಚಿತ್ರದ ನಾಯಕಿ. ಈಟಿವಿ ಶ್ರೀಧರ್, ರಾಘವ್ ನಾಗ್, ಅಶ್ವಿನ್ ಹಾಸನ್ ತಾರಾಬಳಗದಲ್ಲಿದ್ದಾರೆ. ಬೆಂಗಳೂರು, ಉಡುಪಿ, ಮುರುಡೇಶ್ವರ ಕಡಲತೀರಗಳಲ್ಲಿ ಚಿತ್ರೀಕರಣ ನಡೆದಿದೆ.

ಪನ್ನಗ ಸೋಮಶೇಖರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಅನಿಲ್ ಸಿ.ಜೆ. ಸಂಗೀತ ನಿರ್ದೇಶನ, ಕೀರ್ತನ್ ಪೂಜಾರ್ ಛಾಯಾಗ್ರಹಣ ಹಾಗೂ ಆಶಿಕ್ ಕುಸುಗೊಳ್ಳಿ, ಉಮೇಶ್ ಭೋಸಗಿ ಅವರ ಸಂಕಲನವಿದೆ.

ಇದೇನು ಶಿವರಾಮ ಕಾರಂತರ ಚಿತ್ರವಲ್ಲ. ಚಿತ್ರದ ನಾಯಕನ ಹೆಸರು ಭಾರ್ಗವ ಎಂದು. ಅವನು ಕಡಲ ತೀರದ ನಿವಾಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.