×
ADVERTISEMENT
ಈ ಕ್ಷಣ :
ADVERTISEMENT

ಐಸ್‌ ಇರದ ‘ಕ್ರೀಂ’ನಲ್ಲಿ ಏನಿದೆ? ಅಗ್ನಿ ಶ್ರೀಧರ್‌ ಹೇಳಿದ್ದೇನು?

Published : 16 ಜನವರಿ 2022, 10:14 IST
ಫಾಲೋ ಮಾಡಿ
Comments

ಕ್ರೀಂ ಎಂದರೆ ಐಸ್‌ಕ್ರೀಂ ಅಲ್ಲ, ಬೇರೆ ಯಾವ ಕ್ರೀಮೂ ಅಲ್ಲ. ಹಾಗಿದ್ದರೆ ಏನು? 

‘ಕ್ರೀಂ’ ಹೆಸರಿನಲ್ಲೇ ಚಿತ್ರವೊಂದು ಸೆಟ್ಟೇರಿದೆ. ಈ  ಚಿತ್ರದ ಕಥೆ, ಸಂಭಾಷಣೆ ಬರೆದವರು ಅಗ್ನಿ ಶ್ರೀಧರ್‌. 

‘ದೇವಿ ಮಂತ್ರದಲ್ಲಿರುವ ಸಂಸ್ಕೃತ ಶಬ್ದವೇ ‘ಕ್ರೀಂ’. ನನ್ನ ಹಿಂದಿನ ಕಥೆಗಳಿಗಿಂತ ಇದು ಭಿನ್ನವಾಗಿರಲಿದೆ. ವಾಸ್ತಾವಾಂಶಗಳು ಕಥೆಯಲ್ಲಿ ಹೆಚ್ಚಿರುತ್ತದೆ. ಮಹಿಳಾ ಪ್ರಧಾನ ಚಿತ್ರವಿದು. ಈ ಸದ್ಯಕ್ಕೆ ಚಿತ್ರದ ಬಗ್ಗೆ ಇಷ್ಟು ಮಾಹಿತಿ ನೀಡಬಹುದು’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು ಶ್ರೀಧರ್‌.

ಕಿಕ್‌ ಬಾಕ್ಸಿಂಗ್‌ ಮಾಡುತ್ತಾರಾ ಸಂಯುಕ್ತಾ?

‘ಈ ಪಾತ್ರಕ್ಕೆ ಸಂಯುಕ್ತ ಹೆಗ್ಡೆ ನನ್ನ ಭೇಟಿಯಾಗಲು ಬಂದಾಗ, ಎದುರು ನಿಂತಿರುವ ನಿರ್ದೇಶಕರೊಡನೆ ಕಿಕ್ ಬಾಕ್ಸಿಂಗ್ ಮಾಡಲು‌ ಹೇಳಿದೆ. ಆಕೆ ತಕ್ಷಣ ಸಿದ್ದವಾದರು. ಆಗ ಈ ಪಾತ್ರಕ್ಕೆ ನನ್ನ ಆಯ್ಕೆ ಸರಿ‌ ಎನಿಸಿತು’ ಎಂದು ಸಂಯುಕ್ತಾ ಅವರು ಚಿತ್ರಕ್ಕೆ ಆಯ್ಕೆಯಾದ ಬಗೆಯನ್ನು ವಿವರಿಸಿದರು ಶ್ರೀಧರ್‌.

‘ನಾನು ಈ ಚಿತ್ರದಲ್ಲಿ ಫಿಮೇಲ್ ಹೀರೋ ಅನ್ನಬಹುದು. ನಾನು ಈವರೆಗೂ ಮಾಡಿರದ ಪಾತ್ರವಿದು’ ಎಂದರು ಸಂಯುಕ್ತಾ.

ಈ ಚಿತ್ರಕ್ಕೆ ಅಭಿಷೇಕ್‌ ಬಸಂತ್‌ ಅವರ ನಿರ್ದೇಶನವಿದೆ. ಸಂವರ್ಧಿನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಡಿ.ಕೆ.ದೇವೇಂದ್ರ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಅರುಣ್ ಸಾಗರ್, ರೋಷನ್‌ ತಾರಾಗಣದಲ್ಲಿದ್ದಾರೆ. ಸುನೋಜ್ ವೇಲಾಯುಧನ್ ಛಾಯಾಗ್ರಾಹಕರು.

‘ದೇವಿ ಮಂತ್ರದಲ್ಲಿರುವ ಸಂಸ್ಕೃತ ಶಬ್ದವೇ ‘ಕ್ರೀಂ’. ನನ್ನ ಹಿಂದಿನ ಕಥೆಗಳಿಗಿಂತ ಇದು ಭಿನ್ನವಾಗಿರಲಿದೆ. ವಾಸ್ತಾವಾಂಶಗಳು ಕಥೆಯಲ್ಲಿ ಹೆಚ್ಚಿರುತ್ತದೆ. ಮಹಿಳಾ ಪ್ರಧಾನ ಚಿತ್ರವಿದು. ಈ ಸದ್ಯಕ್ಕೆ ಚಿತ್ರದ ಬಗ್ಗೆ ಇಷ್ಟು ಮಾಹಿತಿ ನೀಡಬಹುದು ಎಂದರು ಅಗ್ನಿ ಶ್ರೀಧರ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT