ಪ್ರಾಚೀನ ದಿನಗಳಲ್ಲಿ ವಿದ್ಯುಚ್ಛಕ್ತಿ ಮತ್ತು ಕಾಂತೀಯತೆಯನ್ನು ಪ್ರತ್ಯೇಕ ವಿಷಯಗಳಂತೆ ಪರಿಗಣಿಸಲಾಗುತ್ತಿತ್ತು. 1820ರಲ್ಲಿ ಡ್ಯಾನಿಶ್ ವಿಜ್ಞಾನಿ ಒಯಿರ್‌ಸ್ಟೆಡ್(Oersted) ಅವರು ‘ಒಂದು ದಿಕ್ಸೂಚಿಯ ಬಳಿ ವಿದ್ಯುತ್ ಪ್ರವಹಿಸುತ್ತಿರುವ ತಂತಿಯನ್ನು ಇಟ್ಟಾಗ ದಿಕ್ಸೂಚಿಯ ಸೂಚಿಯು ಓರೆಯಾಗುತ್ತದೆ ಎಂಬುದನ್ನು ತೋರಿಸಿದರು.