×
ADVERTISEMENT
ಈ ಕ್ಷಣ :
ADVERTISEMENT

ಹೈಬ್ರಿಡ್‌ ಕಲಿಕೆಯ ಮಾದರಿಗೆ ಆದ್ಯತೆ: ಎಚ್‌ಪಿ ಇಂಡಿಯಾ ವರದಿ

Last Updated 20 ಜನವರಿ 2022, 13:46 IST
Comments
ಅಕ್ಷರ ಗಾತ್ರ

ಬೆಂಗಳೂರು: ಹೈಬ್ರಿಡ್‌ ಕಲಿಕೆಯ ಮಾದರಿಗೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಮೊದಲ ಆದ್ಯತೆ ನೀಡಿದ್ದಾರೆ ಎನ್ನುವುದು ಎಚ್‌ಪಿ ಇಂಡಿಯಾ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ಭೌತಿಕ ತರಗತಿಗಳು ಆರಂಭವಾದ ಬಳಿಕವೂ ಯಾವುದಾದರೊಂದು ವಿಧದಲ್ಲಿ ಆನ್‌ಲೈನ್‌ ಕಲಿಕೆ ಮುಂದುವರಿಯಬೇಕು ಎನ್ನುವ ಅಭಿಪ್ರಾಯವನ್ನೂ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ವ್ಯಕ್ತಪಡಿಸಿದ್ದಾರೆ.

ಎಚ್‌ಪಿ ಇಂಡಿಯಾ ಫ್ಯೂಚರ್‌ ಆಫ್‌ ಲರ್ನಿಂಗ್‌ ಸ್ಟಡಿ 2022ರ ಪ್ರಕಾರ, ಆನ್‌ಲೈನ್‌ ಶಿಕ್ಷಣ ಮುಂದುವರಿಕೆಗೆ ಶೇ 98ರಷ್ಟು ಪಾಲಕರು ಮತ್ತು ಶೇ 99ರಷ್ಟು ಶಿಕ್ಷಕರು ತಮ್ಮ ಸಹಮತ ಸೂಚಿಸಿದ್ದಾರೆ.

ಆನ್‌ಲೈನ್‌ ಕಲಿಕೆಯು ಭೌತಿಕ ತರಗತಿಯ ಕಲಿಕೆಗೆ ಪೂಕರವಾಗಿದೆ ಎನ್ನುವುದು ಶೇ 91ರಷ್ಟು ವಿದ್ಯಾರ್ಥಿಗಳ ಅಭಿಪ್ರಾಯವಾಗಿದೆ.

ಭೌತಿಕ ತರಗಳಿಗಳಿಂದ ಹೊಸ ಸ್ನೇಹಿತರನ್ನು ಮಾಡಿಕೊಳ್ಳಬಹುದು. ಜೊತೆಗೆ ಶಿಕ್ಷಕರ ಜೊತೆ ಬೆರೆಯಲು ಅವಕಾಶ ಸಿಗುವುದರಿಂದ ಕಲಿಕೆಯು ಇನ್ನಷ್ಟು ಸುಧಾರಿಸಲಿದೆ ಎಂದೂ ಕೆಲವು ವಿದ್ಯಾರ್ಥಿಗಳು ಹೇಳಿದ್ದಾರೆ.

ಬೆಂಗಳೂರನ್ನೂ ಒಳಗೊಂಡು 13 ನಗರಗಳಲ್ಲಿ 207 ಮಂದಿ ಶಿಕ್ಷಕರು, 679 ಮಂದಿ ಪೋಷಕರು ಹಾಗೂ 711 ಮಂದಿ ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಿಸಿ ಈ ವರದಿ ಸಿದ್ಧಪಡಿಸಿರುವುದಾಗಿ ಕಂಪನಿಯು ತಿಳಿಸಿದೆ.

‘ಹೈಬ್ರಿಡ್ ಕಲಿಕೆಯ ಮಾದರಿಯಿಂದಾಗಿ ಆನ್‌ಲೈನ್ ಸಂಪನ್ಮೂಲಗಳು ಮತ್ತು ಸಾಂಪ್ರದಾಯಿಕ ತರಗತಿಗಳ ವೈಯಕ್ತಿಕ ಸಂವಹನ ಇವೆರಡರ ಸಂಯೋಜನೆ ಆಗಲಿದ್ದು, ಕಲಿಕೆಯ ಗುಣಮಟ್ಟವು ಇನ್ನಷ್ಟು ಉತ್ತಮಗೊಳ್ಳಲಿದೆ ಎಂದು ಎಚ್‌ಪಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಕೇತನ್‌ ಪಟೇಲ್‌ ಹೇಳಿದ್ದಾರೆ.

ಹೈಬ್ರಿಡ್‌ ಕಲಿಕೆಯ ಮಾದರಿಗೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಮೊದಲ ಆದ್ಯತೆ ನೀಡಿದ್ದಾರೆ ಎನ್ನುವುದು ಎಚ್‌ಪಿ ಇಂಡಿಯಾ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT