×
ADVERTISEMENT
ಈ ಕ್ಷಣ :
ADVERTISEMENT

ಯುರೇನಿಯಂ ಕಾರ್ಪೊರೇಶನ್‌ ಇಂಡಿಯಾ: 242 ಹುದ್ದೆಗಳಿಗೆ ಅರ್ಜಿ

Published : 16 ಅಕ್ಟೋಬರ್ 2021, 6:30 IST
ಫಾಲೋ ಮಾಡಿ
Comments

ಯುರೇನಿಯಂ ಕಾರ್ಪೊರೇಶನ್‌ ಆಫ್‌ ಇಂಡಿಯಾ ಲಿಮಿಟೆಡ್ (UCIL)ನಲ್ಲಿ ಖಾಲಿ ಇರುವ  242 ಟ್ರೇಡ್ ಅಪ್ರೆಂಟಿಸ್‌ಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. 

ಹುದ್ದೆಗಳ ವಿವರ: ಫಿಟ್ಟರ್, ಟರ್ನರ್‌, ಎಲೆಕ್ಟ್ರಿಷಿಯನ್, ಮೆಕ್ಯಾನಿಸ್ಟ್‌, ಪ್ಲಂಬರ್‌, ಪೇಂಟರ್‌.

ಒಟ್ಟು ಹುದ್ದೆಗಳ ಸಂಖ್ಯೆ: 242

ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಎಸ್ಸೆಸ್ಸೆಲ್ಸಿ ಹಾಗೂ ಐಟಿಐ ವಿದ್ಯಾರ್ಹತೆಯನ್ನು ಮುಗಿಸಿರಬೇಕು.

ವಯೋಮಿತಿ ಸಡಿಲಿಕೆ: ಅಕ್ಟೋಬರ್‌ 2021ಕ್ಕೆ ಅನ್ವಯವಾಗುವಂತೆ ಕನಿಷ್ಠ 15, ಗರಿಷ್ಠ 24 ವರ್ಷದವರಾಗಿರಬೇಕು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲರಿಗೆ 10 ವರ್ಷಗಳ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ನೇಮಕಾತಿ ವಿಧಾನ: ಎಸ್ಸೆಸ್ಸೆಲ್ಸಿ ಹಾಗೂ ಐಟಿಐನಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್‌ ಲಿಸ್ಟ್‌ ತಯಾರಿಸಿ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಅಧಿಕೃತ ವೆಬ್‌ಸೈಟ್‌ http://www.ucil.gov.in ಗೆ ಲಾಗಿನ್‌ ಆಗಿ ಅರ್ಜಿ ಸಲ್ಲಿಸುವ ಮಾಹಿತಿಯನ್ನು ಪಡೆಯಬಹುದು. ಇತರೆ ವಿಧಾನದಲ್ಲಿ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನ: 29, ಅಕ್ಟೋಬರ್‌ 2021

ವೆಬ್‌ಸೈಟ್‌: http://www.ucil.gov.in

ಯುರೇನಿಯಂ ಕಾರ್ಪೊರೇಶನ್‌ ಆಫ್‌ ಇಂಡಿಯಾ ಲಿಮಿಟೆಡ್ (UCIL)ನಲ್ಲಿ ಖಾಲಿ ಇರುವ  242 ಟ್ರೇಡ್ ಅಪ್ರೆಂಟಿಸ್‌ಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT