ವಿಜಯಪುರ: ‘ಶಾಸಕ ಎಂ.ಬಿ.ಪಾಟೀಲರು ಲಿಂಗಾಯತ ನಾಯಕರಲ್ಲ. ಸರ್ಕಾರದ ಜಾತಿ ಪಟ್ಟಿಯಲ್ಲಿ ಅವರ ಸಮುದಾಯವಿಲ್ಲ‘ ಎಂದು ತಮ್ಮ ಹಿಂಬಾಲಕರಿಂದ ಬಾಲಿಶಃ ಹೇಳಿಕೆ ಕೊಡಿಸುವ ಮೂಲಕ ಸಚಿವ ಗೋವಿಂದ ಕಾರಜೋಳ ಅವರು ಕನಿಷ್ಠ ಪ್ರಜ್ಞೆ ಇಲ್ಲದೆ ಲಿಂಗಾಯತರ ಅಸ್ಮಿತೆಯೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ರಾಷ್ಟ್ರೀಯ ವಕ್ತಾರ ಸಂಗಮೇಶ ಬಬಲೇಶ್ವರ ಕಿಡಿಕಾರಿದರು.