×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ: ಬೈಕ್‌, ಜೆಸಿಬಿ, ಮನೆಗಳ್ಳರ ಬಂಧನ

Published : 20 ಜನವರಿ 2022, 17:06 IST
ಫಾಲೋ ಮಾಡಿ
Comments

ವಿಜಯಪುರ: ನಗರದಲ್ಲಿ ಇತ್ತೀಚೆಗೆ ನಡೆದಿದ್ದ ಬೈಕ್‌ ಹಾಗೂ ಮನೆ ಕಳವು ಪ್ರಕರಣಗಳಿಗೆ ‌ಸಂಬಂಧಿಸಿದಂತೆ ಗಾಂಧಿ ಚೌಕ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿ, ಒಟ್ಟು ₹10.53 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಬಲೇಶ್ವರ ತಾಲ್ಲೂಕಿನ ಹೊಸೂರು ಗ್ರಾಮದ ಕೂಲಿಕಾರ ಮತ್ತಪ್ಪ ಮೂಲಿಮನಿ(25), ಕಾಶಿನಕೇರಿ ತಾಂಡಾದ ಸಿವಿಲ್ ಕಾಂಟ್ರಾಕ್ಟರ್ ಮಹಾವೀರ ಚವ್ಹಾಣ(33)ನನ್ನು ಬಂಧಿಸಿದ್ದಾರೆ.

ಆರೋಪಿಗಳು ವಿಜಯಪುರದ ರಹೀಂ ನಗರ, ಗ್ಯಾಂಗ್‌ ಬಾವಡಿ ಮತ್ತು ಸರಾಫ್‌ ಬಜಾರದಲ್ಲಿ ಮನೆ ಕಳ್ಳತನ ಹಾಗೂ ಮೂರು ಕಡೆಗಳಲ್ಲಿ ಬೈಕ್‌ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

ಆರೋಪಿಗಳ ಕಡೆಯಿಂದ ₹8.16 ಲಕ್ಷ ಮೌಲ್ಯದ 204 ಗ್ರಾಂ ಬಂಗಾರದ ಆಭರಣ, ₹87,600 ಮೌಲ್ಯದ 1460 ಗ್ರಾಂ ಬೆಳ್ಳಿಯ ಆಭರಣ ಹಾಗೂ ₹1.50 ಲಕ್ಷ ಮೌಲ್ಯದ 3 ಬೈಕುಗಳು ವಶಪಡಿಸಿದ್ದಾರೆ.

‌ಆರೋಪಿಗಳ ಪತ್ತೆ ಕಾರ್ಯದಲ್ಲಿ ಗಾಂಧಿಚೌಕ ಪೊಲೀಸ್ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ರವೀಂದ್ರ ಕೆ.ನಾಯ್ಕೋಡಿ, ಪಿ.ಎಸ್.ಐ ಆರೀಫ್‌ ಮುಷಾಪುರಿ, ಪಿ.ಎಸ್.ಐ ಆರ್.ಬಿ.ಕೂಡಗಿ, ಪ್ರೊಬೇಷನರಿ ಪಿ.ಎಸ್.ಐ ದೀಪಾ ಹಾಗೂ ಸಿಬ್ಬಂದಿ ಎಸ್.ಬಿ ಚನಶಟ್ಟಿ, ಟಿ.ಎಂ.ಶೇಲಾರ, ಬಾಬು.ಕೆ.ಗುಡಿಮನಿ, ಎಚ್.ಎಚ್.ಜಮಾದಾರ, ಶಿವಾನಂದ ಅಳ್ಳಿಗಿಡದ, ಬಶೀರ್‌ ಅಹ್ಮದ್‌ ಎಂ. ಶೇಖ್‌, ರಾಮನಗೌಡ ಬಿ.ಬಿರಾದಾರ, ಎನ್.ಕೆ.ಮುಲ್ಲಾ, ಎಸ್.ವಿ.ಜೋಗಿನ, ವಿಕ್ರಮ ಶಾಪುರ, ಸುನೀಲ ಗೌಳಿ, ಗುಂಡು ಗಿರಣಿವಡ್ಡರ, ಮತೀನ ಬಾಗವಾನ ಪಾಲ್ಗೊಂಡಿದ್ದರು.

ಜೆ.ಸಿ.ಬಿ ಕಳ್ಳರ ಬಂಧನ: ನಾಗಠಾಣ ಗ್ರಾಮ ಪಂಚಾಯಿತಿ ಆವರಣದಲ್ಲಿ ನಿಲ್ಲಿಸಿದ್ದ ಜೆ.ಸಿ.ಬಿ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಆರೋಪಿಗಳು ಸಿಂದಗಿ ತಾಲ್ಲೂಕಿನ ಓತಿಹಾಳ ಗ್ರಾಮದ ವಿಜಯಕುಮಾರ ಬಿರಾದಾರ(26), ಭೀಮನಗೌಡ ಜುಮನಾಳ(34) ಜೆ.ಸಿ.ಬಿ ಸಮೇತ ಸಿಕ್ಕಿಬಿದ್ದಿದ್ದಾರೆ.  

ವಿಜಯಪುರ: ನಗರದಲ್ಲಿ ಇತ್ತೀಚೆಗೆ ನಡೆದಿದ್ದ ಬೈಕ್‌ ಹಾಗೂ ಮನೆ ಕಳವು ಪ್ರಕರಣಗಳಿಗೆ ‌ಸಂಬಂಧಿಸಿದಂತೆ ಗಾಂಧಿ ಚೌಕ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿ, ಒಟ್ಟು ₹10.53 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT