ಹೊಸಪೇಟೆ(ವಿಜಯನಗರ): ‘ಸಮಕಾಲೀನ ಬಿಕ್ಕಟ್ಟುಗಳಿಗೆ ವಿದ್ಯಾರ್ಥಿಗಳು ಮತ್ತು ಯುವಜನತೆ ಮುಖಾಮುಖಿಯಾಗಬೇಕಾದ ಅಗತ್ಯವಿದೆ’ ಎಂದು ಸಿಪಿಐ(ಎಂ) ರಾಜ್ಯ ಪ್ರಧಾನ ಕಾರ್ಯದರ್ಶಿ ಯು.ಬಸವರಾಜ ತಿಳಿಸಿದರು.

ನಗರದ ಶ್ರಮಿಕ ಭವನದಲ್ಲಿ ಭಾನುವಾರ ಸಿಪಿಐ(ಎಂ) ಪಕ್ಷದ ವಿದ್ಯಾರ್ಥಿ ಶಾಖೆಯ ಪ್ರಥಮ ಸಮ್ಮೇಳನದ ಬಹಿರಂಗ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಹೊಸ ಶಿಕ್ಷಣ ನೀತಿ, ಬೆಲೆ ಏರಿಕೆ, ಬಂಡವಾಳಷಾಹಿಗಳ ಧೋರಣೆ ಮತ್ತು ಶ್ರಮಿಕ ವರ್ಗದ ಜನರ ಬದುಕಿನ ಸಮಸ್ಯೆಗಳಿಗೆ ಹೋರಾಟದ ಮೂಲಕ ಮುಖಾಮುಖಿ ಆಗಬೇಕು. ಸ್ವಾತಂತ್ರ್ಯ ನಂತರ ಶಿಕ್ಷಣದ ಮೂಲಕ ಸಮ ಸಮಾಜವನ್ನು ಕಟ್ಟಲು ಸಂವಿಧಾನದ ಆಶಯಗಳನ್ನು ಒಳಗೊಳ್ಳುವಂತೆ ಶೈಕ್ಷಣಿಕ ನೀತಿಗಳನ್ನು ರೂಪಿಸಲಾಯಿತು. ಆದರೆ, 2020ರ ಹೊಸ ಶಿಕ್ಷಣ ನೀತಿ ಸಂವಿಧಾನದ ಆಶಯಗಳಿಗೆ ಧಕ್ಕೆಯುಂಟಾಗುವ ಧೋರಣೆಯನ್ನು ಹೊಂದಿದೆ’ ಎಂದು ಆರೋಪಿಸಿದರು.

ವಿದ್ಯಾರ್ಥಿ ಶಾಖೆಯ ಕಾರ್ಯದರ್ಶಿ ಎಂ.ಮುನಿರಾಜು, ‘ಪಠ್ಯಕ್ರಮದ ಮೂಲಕ ಭಾರತದ ಕಣ್ಣೆದುರಿನ ಚರಿತ್ರೆಯನ್ನು ಹೊಸ ಶಿಕ್ಷಣ ನೀತಿ ಮೂಲಕ ತಿರುಚಲಾಗುತ್ತಿದೆ. ಅದಕ್ಕೆ ಯುವಜನತೆ ಪ್ರತಿರೋಧ ತೋರಿಸಬೇಕು. ಇಲ್ಲವಾದಲ್ಲಿ ಇಡೀ ಶಿಕ್ಷಣ ವ್ಯವಸ್ಥೆ ಹಾಳಾಗುವ ಆತಂಕವಿದೆ’ ಎಂದು ತಿಳಿಸಿದರು.

ಸಭೆಯಲ್ಲಿ ವಿದ್ಯಾರ್ಥಿ ಶಾಖೆಯ ನೂತನ ಕಾರ್ಯದರ್ಶಿಯಾಗಿ ಸಂಗಮೇಶ ಶಿವಣಗಿ ಅವರನ್ನು ಆಯ್ಕೆ ಮಾಡಲಾಯಿತು.

ಸಿಪಿಐ(ಎಂ) ತಾಲ್ಲೂಕು ಕಾರ್ಯದರ್ಶಿ ಆರ್.ಭಾಸ್ಕರ್ ರೆಡ್ಡಿ, ಮುಖಂಡರಾದ ಎಂ.ಜಂಬಯ್ಯ ನಾಯಕ, ಕರುಣಾನಿಧಿ, ಎಚ್.ಕೃಷ್ಣಮೂರ್ತಿ, ದೊಡ್ಡ ಬಸವರಾಜು, ತಾಯಶ್ರೀ, ಶಿವಕುಮಾರ್, ಸ್ವಪ್ನಾ ಇದ್ದರು.

‘ಸಮಕಾಲೀನ ಬಿಕ್ಕಟ್ಟುಗಳಿಗೆ ವಿದ್ಯಾರ್ಥಿಗಳು ಮತ್ತು ಯುವಜನತೆ ಮುಖಾಮುಖಿಯಾಗಬೇಕಾದ ಅಗತ್ಯವಿದೆ’ ಎಂದು ಸಿಪಿಐ(ಎಂ) ರಾಜ್ಯ ಪ್ರಧಾನ ಕಾರ್ಯದರ್ಶಿ ಯು.ಬಸವರಾಜ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.