ಉಡುಪಿ: ಗಣರಾಜ್ಯೋತ್ಸವ ಪರೇಡ್‌ನಲ್ಲಿ ನಾರಾಯಣ ಗುರುಗಳ ಹೆಸರನ್ನು ಮುಂದಿಟ್ಟುಕೊಂಡು ಕೇರಳ ರಾಜ್ಯ ಅನವಶ್ಯಕ ವಿವಾದ ಸೃಸ್ಟಿಸುತ್ತಿರುವುದು ಸರಿಯಲ್ಲ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.

ಈವರೆಗೂ ನಡೆದುಕೊಂಡ ಬಂದ ಪದ್ಧತಿಯಂತೆ ಗಣರಾಜ್ಯೋತ್ಸವ ಪೆರೇಡ್‌ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿ 36 ಕಡೆಗಳಿಂದ ಸ್ತಬ್ಧಚಿತ್ರಗಳನ್ನುಕಳುಹಿಸಲಾಗುತ್ತದೆ. ಆದರೆ, ಪರೇಡ್‌ಗೆ 12 ರಾಜ್ಯಗಳ ಸ್ತಬ್ಧ ಚಿತ್ರಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪರೇಡ್‌ನಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ. 3 ವರ್ಷಕ್ಕೊಮ್ಮೆ ಪ್ರತಿ ರಾಜ್ಯಗಳಿಗೆ ಭಾಗವಹಿಸುವ ಅವಕಾಶವಿರುತ್ತದೆ.

ಅದರಂತೆ, 2018 ಮತ್ತು 2021ರಲ್ಲಿ ಕೇರಳ ರಾಜ್ಯ ಸ್ತಬ್ಧಚಿತ್ರಗಳೊಂದಿಗೆ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿತ್ತು. ಪುನರಾವರ್ತಿತ ನಿಯಮದಂತೆ ಕಳೆದ ವರ್ಷ ಭಾಗವಹಿಸಿದ ರಾಜ್ಯಗಳನ್ನು ಬಿಟ್ಟು ಉಳಿದ 12 ರಾಜ್ಯಗಳಿಗೆ ಈ ವರ್ಷ ಪರೇಡ್‌ನಲ್ಲಿ ಭಾಗವಹಿಸುವ ಅವಕಾಶವಿರುತ್ತದೆ.

ನಿಯಮಾವಳಿಯಂತೆ 2021ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕೇರಳಕ್ಕೆ ಭಾಗವಹಿಸಲು ಅವಕಾಶ ಇಲ್ಲ. ಈ ನಿಯಮ ತಿಳಿದಿದ್ದರೂ ಕೇರಳ ನಾರಾಯಣ ಗುರುಗಳ ವಿಚಾರವನ್ನು ಮುಂದಿಟ್ಟುಕೊಂಡು ಅನವಶ್ಯಕ ವಿವಾದವನ್ನು ಹುಟ್ಟು ಹಾಕುತ್ತಿದೆ ಎಂದು ಸುನಿಲ್ ಕುಮಾರ್ ಟೀಕಿಸಿದ್ದಾರೆ.

ಕೇರಳವು ನಾರಾಯಣ ಗುರುಗಳ ವಿಚಾರವನ್ನು ಎಳೆದು ತಂದು ವಿವಾದ ಹುಟ್ಟು ಹಾಕುತ್ತಿರುವುದು ಶೋಭೆ ತರುವಂಥದ್ದಲ್ಲ. ಕಮ್ಯುನಿಸ್ಟ್ ನಿಲುವು ಹೊಂದಿರುವ ಕೇರಳ, ಹಿಂದೆ ಹಿಂದೂ ದೇವಾಲಯಗಳ ಬಗ್ಗೆ ತೋರಿದ ನಿಲುವು, ಹಿಂದೂ ಕಾರ್ಯಕರ್ತರ ಹತ್ಯೆ ಹಾಗೂ ಹಿಂದೂ ವಿರೋಧಿ ನೀತಿಗಳಿಂದ ಕುಖ್ಯಾತಿ ಹೊಂದಿದೆ.

‘ಕಮ್ಯುನಿಸ್ಟರಿಂದ ನಾರಾಯಣ ಗುರುಗಳ ತತ್ವಾದರ್ಶವನ್ನು ಕಲಿಯಬೇಕಾಗಿಲ್ಲ. ನಾರಾಯಣ ಗುರುಗಳು ಎಲ್ಲರಿಗೂ ಪ್ರಾತಃ ಸ್ಮರಣೀಯರು ಹಾಗೂ ಪೂಜನೀಯರು’ ಎಂದು ಸುನಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.