ಕನಕಪುರ: ಸಂಕ್ರಾಂತಿ ರೈತರಿಗೆ ವರ್ಷದ ಮೊದಲ ಹಬ್ಬವಾಗಿದೆ. ಜಮೀನುಗಳಲ್ಲಿ ಬೆಳೆದಿರುವ ಹೊಸ ದವಸ ಧಾನ್ಯವನ್ನು ಮನೆಗೆ ತರುವ ಸಮಯವಾಗಿದೆ. ರೈತರ ಜೀವನದಲ್ಲಿ ಇದೊಂದು ವಿಶೇಷ ಸಂದರ್ಭವಾಗಿದೆ ಎಂದು ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಕೂ.ಗಿ. ಗಿರಿಯಪ್ಪ ತಿಳಿಸಿದರು.

ಇಲ್ಲಿನ ರಂಗನಾಥ ಬಡಾವಣೆಯ ಹೊಂಗಿರಣ ಆವರಣದಲ್ಲಿ ಜಿಲ್ಲಾ ಲೇಖಕರ ವೇದಿಕೆಯಿಂದ ಶುಕ್ರವಾರ ನಡೆದ ಸಂಕ್ರಾಂತಿ ಕವಿಗೋಷ್ಠಿ ಹಾಗೂ ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವರ್ಷವೆಲ್ಲಾ ರೈತನ ಜತೆಯಲ್ಲಿ ದುಡಿದು ದಣಿದಿರುವ ರಾಸುಗಳಿಗೆ ಮಾಡುವ ಹಬ್ಬ ಇದು. ಮನುಷ್ಯ ಹೇಗೆ ವರ್ಷವೆಲ್ಲಾ ಹಬ್ಬಗಳನ್ನು ಆಚರಿಸುವಂತೆ ಸಂಕ್ರಾಂತಿ ಹಬ್ಬ ಪ್ರಮುಖವಾಗಿ ಗೋವುಗಳಿಗೆ ಹಬ್ಬವಾಗಿದೆ ಎಂದು
ಹೇಳಿದರು.

ಹಬ್ಬದಂದು ರಾಸುಗಳಿಗೆ ಮೈ ತೊಳೆದು ಬಗೆ ಬಗೆಯಾಗಿ ಸಿಂಗಾರ ಮಾಡಿ ಅವುಗಳಿಗೆ ದೃಷ್ಟಿ ತೆಗೆಯಲು ಬೆಂಕಿಯಲ್ಲಿ ಕಿಚ್ಚಾಯಿಸುತ್ತಾರೆ. ಅಂದು ಅವುಗಳಿಗೆ ಬಗೆ ಬಗೆಯಾದ ಮೇವು ಹಾಕುತ್ತಾರೆ. ತನ್ನಂತೆ ಆ ಗೋವುಗಳು ಎನ್ನುವುದು ಮನುಷ್ಯನ ಭಾವನೆಯಾಗಿದೆ. ತಮ್ಮ ಜೀವದ ಗೆಳೆಯ, ಅನ್ನ ಕೊಡುವ ಬಾಂಧವ್ಯ ಎಂದು ರೈತ ಭಾವಿಸಿದ್ದಾನೆ ಎಂದು ಹೇಳಿದರು.

ಸಾಹಿತಿ ಚಿಕ್ಕಮರೀಗೌಡ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ನಿವೃತ್ತ ಕೃಷಿ ಅಧಿಕಾರಿ ಟಿ.ಎಂ. ರಾಮಯ್ಯ ಪ್ರಾಸ್ತಾವಿಕ ಮಾತನಾಡಿದರು.

ಸಂಗೀತ ಶಿಕ್ಷಕಿ ವಿಯಜಶಂಕರ್ ಗೀತಗಾಯನ ನಡೆಸಿ ಕೊಟ್ಟರು.

ಹು.ನಾ. ನಾಗೇಂದ್ರ, ಜಿ.ಡಿ. ಮಹದೇವಯ್ಯ, ಮೇದರದೊಡ್ಡಿ ಹನುಮಂತ, ವೆಂಕಟಗಿರಿಯಪ್ಪ ರಾವುಗೋಡ್ಲು, ವೇಣುಗೋಪಾಲ ಗುರಿಕಾರ್, ಎನ್.ಎಂ. ಶಿವಲಿಂಗಯ್ಯ ನಲ್ಲಹಳ್ಳಿ, ಪೂರ್ಣಚಂದ್ರ ರಾಮನಗರ, ಎಂ.ಸಿ. ಶಿವಲಿಂಗಯ್ಯ ರಾಮನಗರ ಕವಿ ಗೋಷ್ಠಿ ನಡೆಸಿಕೊಟ್ಟರು. ರಮೇಶ್ ಆರ್ಯಗೌಡ, ಕಾಡೇಗೌಡ ಗಬ್ಬಾಡಿ, ಅಸ್ಗರ್‌ಖಾನ್, ಕೆ.ಎಸ್. ಭಾಸ್ಕರ್, ಜೈರಾಮೇಗೌಡ, ರಾಜೇಶ್.ಎಸ್.ಆರ್. ಪಾಲ್ಗೊಂಡಿದ್ದರು.

ಸಂಕ್ರಾಂತಿ ರೈತರಿಗೆ ವರ್ಷದ ಮೊದಲ ಹಬ್ಬವಾಗಿದೆ. ಜಮೀನುಗಳಲ್ಲಿ ಬೆಳೆದಿರುವ ಹೊಸ ದವಸ ಧಾನ್ಯವನ್ನು ಮನೆಗೆ ತರುವ ಸಮಯವಾಗಿದೆ. ರೈತರ ಜೀವನದಲ್ಲಿ ಇದೊಂದು ವಿಶೇಷ ಸಂದರ್ಭವಾಗಿದೆ ಎಂದು ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಕೂ.ಗಿ. ಗಿರಿಯಪ್ಪ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.