×
ADVERTISEMENT
ಈ ಕ್ಷಣ :
ADVERTISEMENT

ತುರ್ತು ವಿಚಾರಣೆಗೆ ಮಾತ್ರ ಅವಕಾಶ- ಜಿಲ್ಲಾ ಕೋರ್ಟ್‌ನಲ್ಲಿ ಕೋವಿಡ್ ನಿಯಮ ಕಡ್ಡಾಯ

Published : 17 ಜನವರಿ 2022, 14:52 IST
ಫಾಲೋ ಮಾಡಿ
Comments

ರಾಯಚೂರು: ಹೈಕೋರ್ಟ್‌ ಆದೇಶದಂತೆ ಕೋರ್ಟ್‌ಗಳಲ್ಲಿ ಕಡ್ಡಾಯ ಕೋವಿಡ್‌ ನಿಯಮ ಪಾಲನೆ ಮಾಡಲಾಗುತ್ತಿದ್ದು, ಈ ಬಗ್ಗೆ ಪೂರ್ವ ಅರಿವಿಲ್ಲದೆ ಜಿಲ್ಲಾ ಕೋರ್ಟ್‌ಗೆ ಸೋಮವಾರ ಬಂದಿದ್ದ ಕಕ್ಷಿದಾರರು ಹಾಗೂ ಸಾರ್ವಜನಿಕರು ಪರದಾಡಬೇಕಾಯಿತು. ಕೋರ್ಟ್‌ ಆವರಣ ಪ್ರವೇಶಿಸಲು ಅವಕಾಶ ಇರಲಿಲ್ಲ.

ಕೋರ್ಟ್ ಎದುರಿನ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಜನರು ಜಮಾಯಿಸಿದ್ದರಿಂದ ಕೆಲವು ಕಾಲ ವಾಹನಗಳ ಓಡಾಟಕ್ಕೆ ತೊಂದರೆ ಆಗಿತ್ತು. ಪೊಲೀಸರು ಸ್ಥಳಕ್ಕೆ ಆಗಮಿಸಿ, ಸುಗಮ ಸಂಚಾರಕ್ಕೆ ಅವಕಾಶ ಮಾಡಬೇಕಾಯಿತು. ನ್ಯಾಯಾಧೀಶ ಮಹದೇವಪ್ಪ ಅವರು ಕೋರ್ಟ್‌ ಆವರಣ ದ್ವಾರಕ್ಕೆ ಬಂದು ಜನರಿಗೆ ತಿಳಿವಳಿಕೆ ನೀಡಿ ತೆರಳಿದರು.

ವಕೀಲರಿಂದ ಮಾಹಿತಿ: ರಾಜ್ಯದಲ್ಲಿ ಕೋವಿಡ್‌ ಸೋಂಕು ವ್ಯಾಪಕವಾಗಿ ಹರಡಿಕೊಳ್ಳುತ್ತಿದೆ. ಹೀಗಾಗಿ ಹೈಕೋರ್ಟ್‌ ಆದೇಶದಂತೆ ಕೋವಿಡ್‌ ನಿಯಮಾವಳಿಗಳನ್ನು ಕಡ್ಡಾಯ ಪಾಲನೆ ಮಾಡಲಾಗುತ್ತಿದೆ. ಯಾವುದೇ ಕಕ್ಷಿದಾರರು ತಮ್ಮ ವಕೀಲರ ಮೂಲಕ ಮಾಹಿತಿ ಪಡೆದುಕೊಂಡು ಕೋರ್ಟ್‌ಗೆ ಹಾಜರಾಗಬೇಕು ಎಂದು ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶ ಮಹದೇವಪ್ಪ ತಿಳಿಸಿದ್ದಾರೆ.

ಹೈಕೋರ್ಟ್‌ ಆದೇಶದ ಬಗ್ಗೆ ಗೊತ್ತಿಲ್ಲದೆ ಜನರು ಕೋರ್ಟ್‌ನತ್ತ ಬಂದು ನೆರೆದಿದ್ದಾರೆ. ಸದ್ಯಕ್ಕೆ ಸಾಕ್ಷಿದಾರರ ವಿಚಾರಣೆ ಮಾಡುವುದಕ್ಕೆ ಅವಕಾಶ ಇರುವುದಿಲ್ಲ. ತುರ್ತು ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸಲಾಗುತ್ತದೆ. ಕೋರ್ಟ್‌ಗೆ ಹಾಜರಾಗುವವರದ್ದು ಕಡ್ಡಾಯ ಕೋವಿಡ್‌ ಪರೀಕ್ಷೆ ಆಗಿರಬೇಕು. ಕೋರ್ಟ್‌ಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿದೆ. ಸಾರ್ವಜನಿಕರು ವಿನಾಕಾರಣ ಕೋರ್ಟ್‌ನತ್ತ ಬರಬಾರದು ಎಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.

ವಕೀಲರು ಮಾತ್ರ ಕೋರ್ಟ್‌ ಆವರಣದೊಳಗೆ ಹೋಗುವುದಕ್ಕೆ ಅವಕಾಶವಿದೆ. ಇದರೊಂದಿಗೆ ಕೋರ್ಟ್‌ ಸಮ್ಮತಿಸಿದ ತುರ್ತು ವಿಚಾರಣೆಗೆ ಸಂಬಂಧಿಸಿದವರಿಗೆ ಅವಕಾಶ ನೀಡಲಾಗುತ್ತದೆ. ಇದ್ಯಾವುದರ ಪರಿವೆ ಇಲ್ಲದೆ ಬಂದಿದ್ದ ಜನರು, ಕೋರ್ಟ್‌ ಮುಂಭಾಗದಲ್ಲಿ ಬಹಳ ಹೊತ್ತಿನವರೆಗೂ ಕಾದು ನಿಂತುಕೊಂಡಿದ್ದರು. ಕೊನೆಗೂ ಅಸಹಾಯಕತೆಯಿಂದ ಕೋರ್ಟ್‌ ಆದೇಶವನ್ನು ಮನ್ನಿಸಿ ವಾಪಸಾಗಬೇಕಾಯಿತು.

ರಾಜ್ಯ ಸರ್ಕಾರವು ಕೋವಿಡ್‌ ಮಾರ್ಗಸೂಚಿ ಜಾರಿಗೊಳಿಸಿದ್ದು, ಎಲ್ಲೆಡೆಯಲ್ಲೂ ನಿಯಮಗಳನ್ನು ಜಾರಿಗೊಳಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಿಯಮ ಪಾಲಿಸದವರಿಗೆ ಪೊಲೀಸರು ದಂಡ ವಿಧಿಸುತ್ತಾರೆ. ಆದರೆ, ಕೋರ್ಟ್‌ನಲ್ಲಿ ನಿಯಮದ ವಿರುದ್ಧ ನಡೆದುಕೊಳ್ಳುವುದಕ್ಕೆ ಅವಕಾಶವೇ ಇಲ್ಲ ಎಂಬುದನ್ನು ಗಮನಿಸಬೇಕು.

ಹೈಕೋರ್ಟ್‌ ಆದೇಶದಂತೆ ಕೋರ್ಟ್‌ಗಳಲ್ಲಿ ಕಡ್ಡಾಯ ಕೋವಿಡ್‌ ನಿಯಮ ಪಾಲನೆ ಮಾಡಲಾಗುತ್ತಿದ್ದು, ಈ ಬಗ್ಗೆ ಪೂರ್ವ ಅರಿವಿಲ್ಲದೆ ಜಿಲ್ಲಾ ಕೋರ್ಟ್‌ಗೆ ಸೋಮವಾರ ಬಂದಿದ್ದ ಕಕ್ಷಿದಾರರು ಹಾಗೂ ಸಾರ್ವಜನಿಕರು ಪರದಾಡಬೇಕಾಯಿತು. ಕೋರ್ಟ್‌ ಆವರಣ ಪ್ರವೇಶಿಸಲು ಅವಕಾಶ ಇರಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT