ಸಣಾಪುರ (ಗಂಗಾವತಿ): ತಾಲ್ಲೂಕಿನ ಸಾಣಾಪುರ ಕೆರೆಯಲ್ಲಿ ಈಜಾಡಲು ಹೋದ ತೆಲಂಗಾಣ ಮೂಲದ ಇಬ್ಬರು ಐಟಿಬಿಟಿ ಉದ್ಯೋಗಸ್ಥರು ನೀರಿನಲ್ಲಿ ಮುಳಗಿ ಸೋಮವಾರ ಮೃತಪಟ್ಟಿದ್ದಾರೆ.

ಮಧುಕಿರಣ್ (25), ರಾಜೇಶ್ ಕುಮಾರ್ (26) ಮೃತಪಟ್ಟವರು. ಇವರು ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ನಿವಾಸಿಗಳೆಂದು ಗುರುತಿಸಲಾಗಿದೆ.

ಮಧುಕಿರಣ್ ಸೇರಿ ಮೂವರು ಐಟಿಬಿಟಿ ಉದ್ಯೋಗಸ್ಥರು ಹೈದಾರಬಾದ್ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ರಾಜ್ಯ ಪ್ರವಾಸಿ ತಾಣಗಳನ್ನು ವಿಕ್ಷೀಣೆ ಮಾಡಲು ಬಂದು ಶನಿವಾರ ಸಂಗಾಪುರ ಗ್ರಾಮದ ಮೇಘರಾಜ್ ರೆಸಾರ್ಟ್‌ನಲ್ಲಿ ತಂಗಿದ್ದರು.

ನಂತರ ಭಾನುವಾರ ಬೆಳಿಗ್ಗೆ ಸಾಣಪುರ ಗ್ರಾಮದ ಕೆರೆಗೆ ಭೇಟಿ, ನೀಡಿ, ರಾತ್ರಿ ಅಲ್ಲಿಯೇ ತಮ್ಮ ಕಾರಿನಲ್ಲಿ ಉಳಿದುಕೊಂಡಿದ್ದರು.

ಬೆಳಿಗ್ಗೆ ನಾಲ್ಕು ಜನರು ಕೆರೆಗೆ ಈಜಾಡಲು ಹೋಗಿ, ಇಬ್ಬರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು, ಘಟಾನಾ ಸ್ಥಳಕ್ಕೆ ಪೋಲಿಸ್ ಸಿಬ್ಬಂದಿ, ಅಗ್ನಿ ಶಾಮಕದಳ ಆಗಮಿಸಿ ಶೋಧ ನಡೆಸಿದಾಗ ಇಬ್ಬರ ಮೃತ ದೇಹಗಳು ಪತ್ತೆಯಾಗಿವೆ.

ನಾಲ್ವರಲ್ಲಿ ಇಬ್ಬರು ಮೃತಪಟ್ಟಿದ್ದು, ನರಸಿಂಹ, ಅಲೋಕ ಕುಮಾರ ಎಂಬ ವ್ಯಕ್ತಿಗಳು ಈಜುವ ಮೂಲಕ ದಡ ಸೇರಿದ್ದಾರೆ.

ಈ ವೇಳೆಯಲ್ಲಿ ಗ್ರಾಮೀಣ ಪೋಲಿಸ್ ಠಾಣೆ ಸಿಬ್ಬಂದಿ, ಅರಕ್ಷಕದಳ, ಅಗ್ನಿಶಾಮಕ ದಳ ಇದ್ದರು. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಣಾಪುರ ಕೆರೆಯಲ್ಲಿ ಈಜಾಡಲು ಹೋದ ತೆಲಂಗಾಣ ಮೂಲದ ಇಬ್ಬರು ಐಟಿಬಿಟಿ ಉದ್ಯೋಗಸ್ಥರು ನೀರಿನಲ್ಲಿ ಮುಳಗಿ ಸೋಮವಾರ ಮೃತಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.