×
ADVERTISEMENT
ಈ ಕ್ಷಣ :
ADVERTISEMENT

ಅರ್ಜಿ ವಿಲೇವಾರಿ ಪ್ರಗತಿ ಉತ್ತಮ : ವಿಶ್ವನಾಥ

ತಹಶೀಲ್ದಾರ್‌ ಕಚೇರಿ: ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ
Published : 28 ಡಿಸೆಂಬರ್ 2023, 10:52 IST
Last Updated : 28 ಡಿಸೆಂಬರ್ 2023, 10:52 IST
ಫಾಲೋ ಮಾಡಿ
Comments

ಪ್ರಜಾವಾಣಿ ವಾರ್ತೆ

ಗಂಗಾವತಿ: ಪಿಂಚಣಿ, ನಕಲಿ ಆಧಾರ್, ಅಂಚೆ, ಪಹಣಿ ತಿದ್ದುಪಡಿ, ವಿವಾದಾಸ್ಪದ ಆರ್.ಆರ್.ಟಿ, ಸಾರ್ವಜನಿಕ ರುದ್ರಭೂಮಿ ಸೇರಿ ವಿವಿಧ ಪ್ರಕರಣಗಳ ವಿಲೇವಾರಿಗೆ ಉಪತಹಶೀಲ್ದಾರ್‌, ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಸಹಾಯಕರು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ ಉತ್ತಮ ಪ್ರಗತಿ ಸಾಧಿಸಿದ್ದಾರೆ ಎಂದು ಪ್ರಭಾರ ತಹಶೀಲ್ದಾರ್ ವಿಶ್ವನಾಥ ಮುರಡಿ ಹೇಳಿದರು.

ನಗರದ ತಹಶೀಲ್ದಾರ್‌ ಕಚೇರಿಯಲ್ಲಿ ಗುರುವಾರ ನಡೆದ ಕಂದಾಯ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸಾಮಾಜಿಕ ಭದ್ರತೆ ಯೋಜನೆಯ ಪಿಂಚಣಿಗಳು ಕೆಲ ಫಲಾನುಭವಿಗಳಿಗೆ ತಲುಪುತ್ತಿರಲಿಲ್ಲ. ಆಧಾರ್ ಸೀಡಿಂಗ್ ಆಗದ ಫಲಾನುಭವಿಗಳನ್ನು ಗುರುತಿಸಿ, ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿ, ಪಿಂಚಣಿ ಸೌಲಭ್ಯ ದೊರೆಯುವಂತೆ ಮಾಡಲಾಗಿದೆ. ಹಾಗೆಯೇ ರೈತರ ಖಾತೆಗಳಿಗೆ ಬೇರೆ ಯೋಜನೆಗಳಿಂದ ಬರುವ ಹಣ ನೇರವಾಗಿ ಸಂದಾಯವಾಗಲು ಬ್ಯಾಂಕಿಗೆ ಆಧಾರ್ ಸೀಡಿಂಗ್‌ ಜತೆಗೆ ಪಹಣಿಗೆ ಜೋಡಣೆ ಮಾಡಿ, ಎಫ್ಐಡಿ ನೋಂದಣಿ ಮಾಡಿಸಿ, ಸರ್ಕಾರದಿಂದ ರೈತರಿಗೆ ಬರುವ ಯೋಜನೆಗಳ ಹಣ ಪೋಲಾಗದಂತೆ ಕೃಷಿ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಕೆಲಸ ಮಾಡಲಾಗಿದೆ ಎಂದರು.

ಸಾರ್ವಜನಿಕ ರುದ್ರಭೂಮಿಗಳ ವ್ಯವಸ್ಥೆಗಾಗಿ ಗಂಗಾವತಿ 24, ಮರಳಿ 17, ವೆಂಕಟಗಿರಿ ಹೋಬಳಿಯಿಂದ ಅರ್ಜಿಗಳು ಬಂದಿದ್ದು, ಎಲ್ಲವನ್ನು ವಿಲೇವಾರಿ ಮಾಡಿ ಗ್ರಾಮಗಳಿಗೆ ರುದ್ರಭೂಮಿ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗೇ ವಿವಾದಾಸ್ಪದ ಆರ್.ಆರ್.ಐ ಸಂಬಂಧಪಟ್ಟಂತೆ 140 ಅರ್ಜಿಗಳನ್ನು ಇತ್ಯರ್ಥಪಡಿಲಾಗಿದೆ.

ಪಹಣಿ ತಿದ್ದುಪಡಿಯ 254 ಪ್ರಕರಣಗಳ, ಭೂಮಿಕೇಂದ್ರ ಸೇವೆ ಅರ್ಜಿಯ ಇತ್ಯರ್ಥ 2,543, ಅಟಲ್ ಜೀ ಜನಸ್ನೇಹಿ ಕೇಂದ್ರದ ಸೇವೆಗಳ 7,943, ಸಾಮಾಜಿಕ ಭದ್ರತಾ ಯೋಜನೆಯ ಸೇವೆಯ ಎಲ್ಲ 1,971 ಅರ್ಜಿಗಳನ್ನೂ ವಿಲೇವಾರಿ ಮಾಡಲಾಗಿದೆ ಎಂದರು.

ಗಂಗಾವತಿ, ಮರಳಿ, ವೆಂಕಟಗಿರಿ ಹೋಬಳಿಗಳಿಂದ ಬಂದ ಎಸ್.ಪಿ.ಸಿ.ಐ ಪ್ರಕರಣಗಳ 2,130, ಆಧಾರ್ ಡೂಪ್ಲಿಕೇಟ್ 2,130, ಪಿಂಚಣಿ ಕುರಿತ 2,297, ಅಂಚೆ ಕಚೇರಿ ಇಎಂಓ ಪ್ರಕರಣಗಳ ಎಲ್ಲ 397 ಅರ್ಜಿಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಗ್ರೇಡ್-2 ತಹಶೀಲ್ದಾರ್ ಮಹಾಂತಗೌಡ, ಶಿರಸ್ತೆದಾರ ರವಿಕುಮಾರ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ ಸೇರಿ ತಾಲ್ಲೂಕು ಆಡಳಿತ ಸಿಬ್ಬಂದಿ ಇದ್ದರು‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT