×
ADVERTISEMENT
ಈ ಕ್ಷಣ :
ADVERTISEMENT

ನವರಾತ್ರಿ ಪ್ರವಚನ ಸಮಾರೋಪ

Published : 18 ಅಕ್ಟೋಬರ್ 2021, 5:30 IST
ಫಾಲೋ ಮಾಡಿ
Comments

ನಿಂಬಾಳ (ಆಳಂದ ತಾಲ್ಲೂಕು): ‘ಐತಿಹಾಸಿಕ ಮಹತ್ವ ಪಡೆದ ನಿಂಬಾಳ ಗ್ರಾಮದಲ್ಲಿ ಮುಂದಿನ ವರ್ಷದಿಂದ ದಸರಾ ಮಹೋತ್ಸವವನ್ನು ಸಡಗರ ದಿಂದ ಆಚರಿಸಲಾಗುವುದು. ಎರಡು ವರ್ಷಗಳಿಂದ ಕೊರೊನಾ ಕಾರಣ ಸರಳವಾಗಿ ಆಚರಿಸಲಾಗಿದೆ’ ಎಂದು ಬಿಜೆಪಿ ಯುವ ಮೋರ್ಚಾ ಮುಖಂಡ ಭೀಮಾಶಂಕರ ಪಾಟೀಲ ಹೇಳಿದರು.

ನಿಂಬಾಳ ಗ್ರಾಮದಲ್ಲಿ ತುಳಜಾ ಭವಾನಿ ತರುಣ ಸಂಘದಿಂದ ಆಯೋಜಿಸಿದ್ದ ದುರ್ಗಾ ಪುರಾಣ ‍ಪ್ರವಚನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಗಡಿ ಭಾಗದ ಊರು ನಿಂಬಾಳವು ಹೈದರಾಬಾದ್‌ ಕರ್ನಾಟಕ ವಿಮೋಚನಾ ಚಳವಳಿಗೆ ದೊಡ್ಡ ಕಾಣಿಕೆ ನೀಡಿದೆ’ ಎಂದರು.

‘ಗ್ರಾಮವು ಪೌರಾಣಿಕವಾಗಿಯೂ ಗುರುತಿಸಿಕೊಂಡಿದೆ. ಈ ಗ್ರಾಮದಲ್ಲಿ ದಸರಾ ಮಹೋತ್ಸವವನ್ನು ಪ್ರತಿ ಬಾರಿಯೂ ವೈಭವದಿಂದ ಆಚರಿಸುತ್ತ ಬರಲಾಗಿದೆ. ಬರುವ ವರ್ಷದಲ್ಲಿ ಆ ವೈಭವ ಮರುಕಳಿಸಲಿದೆ’ ಎಂದರು.‌

ಮಾದನಹಿಪ್ಪರಗಿಯ ವಿರಕ್ತಮಠದ ಪೀಠಾಧ್ಯಕ್ಷ ಅಭಿನವ ಶಿವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಮದ ಮುಖಂಡರಾದ ಚಂದ್ರಕಾಂತ ಗದ್ದೆ, ಪರಮೇಶ್ವರ ನಂದೇಣಿ, ಗ್ರಾಮ ಪಂಚಾಯಿತಿ ಸದಸ್ಯ ವಿರೂಪಾಕ್ಷ ಸ್ವಾಮಿ, ಶರಣಪ್ಪ ಕೊಳಕೂರ, ತುಳಜಾ ಭವಾನಿ ಸಂಘದ ಅಧ್ಯಕ್ಷ ಲಕ್ಷ್ಮಣ ಹೊನ್ನಾಳಿ, ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮಣ ತಳಕೇರಿ, ಹಣಮಂತ, ನಾಗರಾಜ ಮೊನಾಗೋಳ, ಗೌರಿಶಂಕರ ಚಲಗೇರಿ, ಶಾಂತಲಿಂಗ ಶೆಟ್ಟಿಕಾರ, ಸಾಗರ ಕೊಳಕೂರ ಇದ್ದರು.

ನಿಂಬಾಳ (ಆಳಂದ ತಾಲ್ಲೂಕು): ‘ಐತಿಹಾಸಿಕ ಮಹತ್ವ ಪಡೆದ ನಿಂಬಾಳ ಗ್ರಾಮದಲ್ಲಿ ಮುಂದಿನ ವರ್ಷದಿಂದ ದಸರಾ ಮಹೋತ್ಸವವನ್ನು ಸಡಗರ ದಿಂದ ಆಚರಿಸಲಾಗುವುದು. ಎರಡು ವರ್ಷಗಳಿಂದ ಕೊರೊನಾ ಕಾರಣ ಸರಳವಾಗಿ ಆಚರಿಸಲಾಗಿದೆ’ ಎಂದು ಬಿಜೆಪಿ ಯುವ ಮೋರ್ಚಾ ಮುಖಂಡ ಭೀಮಾಶಂಕರ ಪಾಟೀಲ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT