ಆಲೂರು: ಪಾಳ್ಯ ಹೋಬಳಿ ಕೇಂದ್ರಕ್ಕೆ ಸಾರಿಗೆ ಬಸ್ಗಳು ಬಾರದೆ, ಬಹುತೇಕ ಎಲ್ಲ ಬಸ್ಸುಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿರುವುದ ರಿಂದ, ಜನಸಾಮಾನ್ಯರು, ವಿದ್ಯಾರ್ಥಿ ಗಳು, ರೋಗಿಗಳು ಪರಿತಪಿಸುತ್ತಿದ್ದಾರೆ.

ಈ ಮೊದಲು ಪಾಳ್ಯ ಹೋಬಳಿ ಕೇಂದ್ರದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲ ಸಾರಿಗೆ ಬಸ್ಗಳು ಓಡಾಡುತ್ತಿದ್ದವು. ವೇಗದೂತ, ಸಾಮಾನ್ಯ ಬಸ್ಗಳು ಬಸ್ ನಿಲ್ದಾಣದಲ್ಲಿ ನಿಂತು ಹೋಗುವುದರಿಂದ ಸುತ್ತಮುತ್ತಲಿನ ಸುಮಾರು 50ಕ್ಕೂ ಹೆಚ್ಚು ಗ್ರಾಮಗಳ ಪ್ರಯಾಣಿಕರಿಗೆ ಅನುಕೂಲವಾಗಿತ್ತು.

ವಿಶೇಷವಾಗಿ ಪಾಳ್ಯ ಕೇಂದ್ರದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಸೂತಿ ವೈದ್ಯಕೀಯ ಚಿಕಿತ್ಸೆಗೆ ಹೊರ ಊರಿನಿಂದ ಬಹುಸಂಖ್ಯೆಯಲ್ಲಿ ಮಹಿಳೆಯರು ಬರುತ್ತಾರೆ. ಈಗ ಊರಿನಿಂದ ಹೊರಗೆ ಬದಲಿ ರಸ್ತೆ ನಿರ್ಮಾಣ ಮಾಡಿರುವುದರಿಂದ ಗರ್ಭಿಣಿಯರಿಗೆ ಬಹಳ ತೊಂದರೆಯಾಗಿದೆ.

ಹಾಸನ, ಸಕಲೇಶಪುರ ಕಡೆಯಿಂದ ಬರುವ ಬಸ್ಗಳಲ್ಲಿ ಪಾಳ್ಯ ಕೇಂದ್ರದಲ್ಲಿ ಇಳಿಯುವ ಪ್ರಯಾಣಿಕರಿದ್ದರೆ, ರಾತ್ರಿ ವೇಳೆಯಲ್ಲಿ ಕತ್ತಲು ಎಂದು ಅರಿಯದೆ ಚಾಲಕ, ನಿರ್ವಾಹಕರು ಹೊರ ರಸ್ತೆಯಲ್ಲಿ ಇಳಿಸಿ ಹೋಗುತ್ತಿದ್ದಾರೆ. ಇದರಿಂದ ವಿದ್ಯಾರ್ಥಿನಿಯರು, ಗರ್ಭಿಣಿಯರು, ಮಹಿಳೆಯರು ಇನ್ನಿಲ್ಲದ ತೊಂದರೆಗೊಳಗಾಗಿದ್ದಾರೆ.

ಹೋಬಳಿ ಕೇಂದ್ರಕ್ಕೆ ಬಸ್ ಬಾರದೆ ಹೊರ ರಸ್ತೆಯಲ್ಲಿ ಹೋಗುತ್ತಿರುವುದರಿಂದ ಎಲ್ಲರಿಗೂ ತೊಂದರೆಯಾಗಿದೆ. ಬಸ್ ಹೊರ ರಸ್ತೆಯಲ್ಲಿ ಸಂಚರಿಸಲು ಯಾರು ಅನುಮತಿ ಕೊಟ್ಟರು. ಬಸ್ ಸಾರ್ವಜನಿಕರ ಆಸ್ತಿ. ಚಾಲಕ, ನಿರ್ವಾಹಕರಿಗೆ ಇಷ್ಟ ಬಂದಂತೆ ನಡೆದುಕೊಳ್ಳುವುದು ಸರಿಯಲ್ಲ. ಕೂಡಲೇ ಎಲ್ಲ ಬಸ್ಗಳು ಪಾಳ್ಯ ಬಸ್ ನಿಲ್ದಾಣದ ಬಳಿ ಬಂದು ಹೋಗದಿದ್ದರೆ ಶೀಘ್ರವೇ ಪ್ರತಿಭಟನೆ ನಡೆಸಲಾಗುವುದು’ ಎಂದು ಪಾಳ್ಯದ ವಿಜಯಕುಮಾರ್ ಎಚ್ಚರಿಕೆ ನೀಡಿದ್ದಾರೆ.

‘ಬಸ್ ನಂಬರ್ ನೀಡಿದರೆ ಕ್ರಮ’

‘ನನಗೆ ವಿಷಯ ಗೊತ್ತಿರಲಿಲ್ಲ. ಈ ಮೊದಲು ಓಡಾಡುತ್ತಿದ್ದ ಎಲ್ಲ ವೇಗದೂತ ಸೇರಿದಂತೆ ಸ್ಥಳೀಯ ಬಸ್ಗಳು ಪಾಳ್ಯ ಕೇಂದ್ರದ ಮೂಲಕ ಓಡಾಡುವಂತೆ ಸೂಚನೆ ನೀಡುತ್ತೇನೆ. ಮುಂದೆ ಇದೇ ರೀತಿ ಮುಂದುವರಿದರೆ ಬಸ್ಸಿನ ನಂಬರ್ ನೀಡಿದರೆ ಶಿಸ್ತು ಕ್ರಮ ಕೈಗೊಳ್ಳುತ್ತೇನೆ’.

ರಾಜೇಶ್, ಸೀನಿಯರ್ ಡಿವಿಜನ್ ಕಂಟ್ರೋಲರ್, ಸಾರಿಗೆ ಇಲಾಖೆ, ಹಾಸನ.

ಆಲೂರು ತಾಲ್ಲೂಕು ಪಾಳ್ಯ ಹೋಬಳಿ ಕೇಂದ್ರಕ್ಕೆ ಬಾರದೆ ಹೊರ ರಸ್ತೆಯಲ್ಲಿ ಸಂಚರಿಸುತ್ತಿರುವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.