ಚನ್ನರಾಯಪಟ್ಟಣ: ಪಟ್ಟಣದ ನವೋದಯ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಐಶ್ವರ್ಯಾ, ಕೇಂದ್ರ
ಮಾನವ ಸಂಪನ್ಮೂಲ ಇಲಾಖೆ ಆಯೋಜಿಸುವ ಎನ್‌ಎಂಎಂಎಸ್ (ನ್ಯಾಷನಲ್ ಮೀನ್ಸ್ ಕಮ್
ಮೆರಿಟ್ ಸ್ಕಾಲರ್ ಶಿಪ್) ಪರೀಕ್ಷೆಯಲ್ಲಿ ಅರ್ಹತೆ ಗಳಿಸಿದ್ದಾರೆ.

8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಎನ್ ಎಂಎಂಎಸ್ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಇದೆ. 2019- 20ನೇ ಸಾಲಿಗೆ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಈಕೆ ಪರೀಕ್ಷೆ ತೆಗೆದುಕೊಂಡು ಯಶಸ್ಸು ಸಾಧಿಸಿದ್ದಾಳೆ. ಸದ್ಯ 10ನೇ ತರಗತಿಯಲ್ಲಿ ಓದುತ್ತಿದ್ದಾಳೆ.

ಗ್ರಾಮೀಣ ಪ್ರತಿಭೆ ಐಶ್ವರ್ಯಾ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಉತ್ತಮ ಸಾಧನೆ ಮಾಡಿದ್ದಾಳೆ. ಪ್ರತಿ ವರ್ಷ ₹ 12 ಸಾವಿರ ವಿದ್ಯಾರ್ಥಿ ವೇತನ ಬರುತ್ತದೆ. ದ್ವಿತೀಯ ಪಿಯುವರೆಗೆ ವಿದ್ಯಾರ್ಥಿ ವೇತನ ಪಡೆಯಲು ಅರ್ಹತೆ ಹೊಂದಿದ್ದಾಳೆ.

‘ಪರೀಕ್ಷೆ ತೇರ್ಗಡೆಯಾಗಲು ಶಾಲೆಯ ಶಿಕ್ಷಕರು ನೀಡಿದ ಮಾರ್ಗದರ್ಶನ, ತರಬೇತಿ ಸಹಕಾರಿಯಾಯಿತು. ಪೋಷಕರ ಸಹಕಾರ ಮರೆಯುವಂತಿಲ್ಲ. ವಿದ್ಯಾರ್ಥಿ ವೇತನದಲ್ಲಿ ಪಠ್ಯಕ್ಕೆ ಪೂರಕವಾದ ಪುಸ್ತಕ ಖರೀದಿಸುತ್ತಿ ದ್ದೇನೆ. ಈ ವರ್ಷ ಎನ್‍ಟಿಎಸ್‍ಇ (ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ) ತೆಗೆದುಕೊಳ್ಳುತ್ತೇನೆ. ಅದರಲ್ಲಿ ಅರ್ಹತೆ ಪಡೆದರೆ ಪದವಿವರೆಗೆ ವಿದ್ಯಾರ್ಥಿ ವೇತನ ಬರುತ್ತದೆ. ಪದವಿ ತೇರ್ಗಡೆಯಾಗಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ ಪೊಲೀಸ್ ಅಧಿಕಾರಿಯಾಗುವ ಆಶಯ ಇದೆ’ ಎಂದು ಐಶ್ವರ್ಯಾ ತಿಳಿಸಿದರು.

ಚನ್ನರಾಯಪಟ್ಟಣ: ಪಟ್ಟಣದ ನವೋದಯ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಐಶ್ವರ್ಯಾ, ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಆಯೋಜಿಸುವ ಎನ್‌ಎಂಎಂಎಸ್ (ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ಸ್ಕಾಲರ್ ಶಿಪ್) ಪರೀಕ್ಷೆಯಲ್ಲಿ ಅರ್ಹತೆ ಗಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.