ಹಾಸನ: ‘ಆರ್.ಎಸ್.ಎಸ್ ಬಗ್ಗೆ ಮಾತನಾಡುವರು ಹಿಂದೂ ಸಮಾಜಕ್ಕೆ ಭಾರವಿದ್ದಂತೆ, ಅವರು ಹೆಚ್ಚು ಹೆಚ್ಚು ಮಾತನಾಡಿದಷ್ಟು ಆರ್.ಎಸ್.ಎಸ್.ಗೆ ಲಾಭ’ ಎಂದು ರಾಷ್ಟ್ರೀಯ ಸ್ವಯಂ ಸೇವಕರ ಸಂಘ (ಆರ್.ಎಸ್.ಎಸ್) ತುಮಕೂರು ವಿಭಾಗದ ಪ್ರಚಾರಕ ಅಕ್ಷಯ್ ಹೇಳಿದರು.

ವಿಜಯದಶಮಿ ಅಂಗವಾಗಿ ನಗರದ ಮಲೆನಾಡು ಎಂಜಿನಿಯರಿಂಗ್ ಕಾಲೇಜು ಆವರಣದಿಂದ ಭಾನುವಾರ ಆಯೋಜಿಸಿದ್ದ ಆರ್.ಎಸ್.ಎಸ್. ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹೊಳೆನರಸೀಪುರದ ನಾಯಕರು ಆರ್.ಎಸ್.ಎಸ್ ಬಗ್ಗೆ ಮಾತನಾಡುವಾಗ ಜಾಗೃತರಾಗಿರಬೇಕು. ನಾಲಿಗೆ ಮೇಲೆ ಹಿಡಿತ ಇರಬೇಕು. ಮುಂದೆ ಹೊಳೆನರಸೀಪುರದವರು ನಮ್ಮ ಸಂಘಟನೆಗೆ ಬಂದರೆ ಸೇರಿಸಿಕೊಳ್ಳುತ್ತೇವೆ. ರಾಜಕೀಯವನ್ನು ನಿಮ್ಮ ಮನೆಯ ಚಪ್ಪಲಿ ಬಳಿಯೇ ಬಿಟ್ಟು ಬನ್ನಿ’ ಎಂದು ಜೆಡಿಎಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.

‘ಆರ್.ಎಸ್.ಎಸ್‌ನಿಂದ ಐ.ಎ.ಎಸ್., ಐ.ಪಿ.ಎಸ್‌ಗೆ ಹೆಚ್ಚು ಮಂದಿ ಆಯ್ಕೆಯಾಗಿದ್ದಾರೆ. ಎಲ್ಲಾ ಜನರು ಆರ್.ಎಸ್.ಎಸ್ ಶಾಖೆಗೆ ಭೇಟಿ ನೀಡುತ್ತಾರೆ. ಇಲ್ಲೇ ಜನಿಸಿದ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಹಿಂದೂ ಧರ್ಮಕ್ಕೆ ಸೇರಿದವರು. ದೇಶದಾದ್ಯಂತ 1,63,500 ಆರ್.ಎಸ್.ಎಸ್. ಶಾಖೆಗಳು ಕಾರ್ಯ ಚಟುವಟಿಕೆ ನಡೆಸುತ್ತಿವೆ. ಮದರ್ ಥೆರೆಸಾ ಅವರು ನಾನಾ ಚಟುವಟಿಕೆಗಳನ್ನು ನಡೆಸಿ ದೇಶದ ಜನರನ್ನು ಮತಾಂತರ ಮಾಡಿದರು. ಮತಾಂತರ ಆದವರನ್ನು ಹಿಂದೂ ಸಮಾಜಕ್ಕೆ ಮತ್ತೆ ವಾಪಸ್ ತರುವ ಕೆಲಸ ಮಾಡಬೇಕಾಗಿದೆ’ ಎಂದು ಹೇಳಿದರು.

‘ಮುಸ್ಲಿಮರು ನಾನಾ ರಾಷ್ಟ್ರಗಳ ಮೇಲೆ ಅನೇಕ ಬಾರಿ ದಾಳಿ ಮಾಡಿದರು. ಪೃಥ್ವಿರಾಜ್ ಚೌಹಾಣ್ ಅವರು ಮಹಮದ್ ಘೋರಿ ಯುದ್ಧದಲ್ಲಿ ಸೋಲಿಸಿ ಕ್ಷಮಾದಾನ ನೀಡಿರುವುದು ಹಿಂದೂ ರಾಜರ ಕ್ಷಮಾಪಣೆ ಗುಣವಾಗಿದೆ. ಪೃಥ್ವಿರಾಜ್ ಚೌಹಾಣ್ ಕ್ಷಮೆ ಕೊಡದಿದ್ದರೆ ಮುಸ್ಲಿಮರು ನಮ್ಮ ದೇಶದಲ್ಲಿ ಸಾಮ್ರಾಜ್ಯ ಸ್ಥಾಪನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಮಹಮದ್ ಘೋರಿ ದೇಶದ ಮೇಲೆ 16 ಬಾರಿ ದಾಳಿ ನಡೆಸಿ, 17ನೇ ಬಾರಿ ಪೃಥ್ವಿರಾಜ್ ಚೌಹಾಣ್ ಮಂತ್ರಿ ಜೊತೆ ಒಪ್ಪಂದ ಮಾಡಿಕೊಂಡು ಹಣದ ಆಮಿಷ ತೋರಿಸಿ ವಂಚನೆಯಿಂದ ಯುದ್ಧದಲ್ಲಿ ಜಯಗಳಿಸಿದ್ದನು’ ಎಂದು ವಿವರಿಸಿದರು.

ನಗರದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಿಂದ ಹೊರಟ ಪಥಸಂಚಲನ ಸಾಲಗಾಮೆ ರಸ್ತೆಯಿಂದ ಕಾರ್ಮಲ್ ಆಶ್ರಮ, ಶಾಂತಿನಗರ, ಹೇಮಾವತಿ ನಗರ, ಜವೇನಹಳ್ಳಿ ಕೆರೆ, ಸಂಗಮೇಶ್ವರ ದೇವಸ್ಥಾನ ಬನ್ನಿ ಮಂಟಪ, ಸರಸ್ವತಿ ದೇವಸ್ಥಾನ ಹಾಗೂ ನಗರದ ಮುಖ್ಯ ರಸ್ತೆಯಲ್ಲಿ ಪಥಸಂಚಲನ ಸಾಗಿ ಬಂದು ಪುನ ನಗರದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೊನೆಗೊಂಡಿತು.

ಪಥಸಂಚಲನ ಮಾಡುತ್ತಿದ್ದ ಆರ್.ಎಸ್.ಎಸ್. ಸಂಚಾಲಕರ ಮೇಲೆ ಮೆರವಣಿಗೆಯಲ್ಲಿ ಪುಷ್ಪವೃಷ್ಠಿ ಮಾಡಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯಾಗಿ ಪೊಲೀಸ್ ಬಿಗಿ ಬಂದೋ ಬಸ್ತ್ ಮಾಡಲಾಗಿತ್ತು.

ಪಥಸಂಚಲನದಲ್ಲಿ ಆರ್.ಎಸ್.ಎಸ್. ನಗರ ಸಂಚಾಲಕ ನಾಗೇಶ್, ಜಿಲ್ಲಾ ಮಾಧ್ಯಮ ಮುಖಂಡ ಮೋಹನ್, ಹಿರಿಯ ಸಂಚಾಲಕ ಪಾರಸ್ ಮಲ್, ಹುಲ್ಲಳ್ಳಿ ಸುರೇಶ್, ವೇಣುಗೋಪಾಲ್, ರಾಜಗೋಪಾಲ್ ಹಾಗೂ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.