‘ವೆಂಕಟೇಶ್ವರ ದೇವಸ್ಥಾನ’ ‘ಗದುಗಿನ ಜುಮ್ಮಾ ಮಸೀದಿಯನ್ನು ಹೊರಗಿನಿಂದ ನೋಡಿದರೇ ಅದು ದೇವಸ್ಥಾನ ಎಂದು ಗೊತ್ತಾಗುತ್ತದೆ’ ಎಂದು ಪ್ರಮೋದ್ ಮುತಾಲಿಕ್ ಹೇಳಿದರು. ‘ನೂರಕ್ಕೆ ನೂರು ಅದು ವೆಂಕಟೇಶ್ವರ ದೇವಸ್ಥಾನವೇ ಆಗಿತ್ತು. ಈ ಸಂಬಂಧ ಸಮಗ್ರ ದಾಖಲೆ ಸಂಗ್ರಹಿಸಿ ಹೋರಾಟ ನಡೆಸಲು ತಯಾರಿ ನಡೆಸಿದ್ದೇವೆ. 80 ವರ್ಷ ದಾಟಿ ಹಿರಿಯರ ಅಭಿಪ್ರಾಯ ಸಂಗ್ರಹ, ದಾಖಲೆಗಳ ಸಂಗ್ರಹ ಮಾಡಿ ಪಿಐಎಲ್ ಹಾಕುವವರಿದ್ದೇವೆ. ಕರ್ನಾಟಕದಲ್ಲಿ ಈ ರೀತಿ ಸಾಕಷ್ಟು ದೇವಸ್ಥಾನಗಳನ್ನು ಒಡೆದು ಮಸೀದಿಗಳನ್ನು ಕಟ್ಟಲಾಗಿದೆ. ಈ ಬಗ್ಗೆಯೂ ಸಮಗ್ರ ಹೋರಾಟ ನಡೆಸಲಾಗುವುದು’ ಎಂದು ಹೇಳಿದರು.