×
ADVERTISEMENT
ಈ ಕ್ಷಣ :
ADVERTISEMENT

ಪತ್ರಿಕಾ ವಿತರಕರ ನಿಗಮ ಸ್ಥಾಪನೆಗೆ ಒತ್ತಾಯ

ಫಾಲೋ ಮಾಡಿ
Comments

ಧಾರವಾಡ: ‘ರಾಜ್ಯದಲ್ಲಿ ಅಸಂಘಟಿತರಾಗಿ ನಿತ್ಯ ದುಡಿಯುತ್ತಿರುವ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿಗೆ ಸರ್ಕಾರ ನಿಗಮ ಸ್ಥಾಪಿಸಬೇಕು’ ಎಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ. ಶಂಭುಲಿಂಗ ಆಗ್ರಹಿಸಿದರು.

ಹುಬ್ಬಳ್ಳಿ ಧಾರವಾಡ ಪತ್ರಿಕಾ ವಿತರಕರ ಸಭೆಯಲ್ಲಿ ಅವರು ಸೋಮವಾರ ಮಾತನಾಡಿದರು.

‘ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಪತ್ರಿಕಾ ವಿತರಕರು ತಮ್ಮ ಜೀವದ ಹಂಗು ತೊರೆದು ಮನೆಮನೆಗೆ ಪತ್ರಿಕೆ ತಲುಪಿಸುವಲ್ಲಿ ಅವಿರತವಾಗಿ ದುಡಿಯುತ್ತಿದ್ದಾರೆ. ಚಳಿ, ಮಳೆ ಏನೇ ಇದ್ದರೂ ಪ್ರತಿ ಮನೆಗೂ ಸರಿಯಾದ ಸಮಯಕ್ಕೆ ಸುದ್ದಿ ಪತ್ರಿಕೆ ತಲುಪಿಸುವ ಕಾಯಕವನ್ನು ಮಾಡುತ್ತಿದ್ದರೂ ಇವರಿಗೆ ಭದ್ರತೆ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಸೌಲಭ್ಯಗಳನ್ನು ಕೇಳುವ ಅಗತ್ಯವಿದೆ’ ಎಂದರು.

‘ಹಿಂದಿನ ಸರ್ಕಾರವು ಪತ್ರಿಕಾ ವಿತರಕರಿಗಾಗಿ ₹2ಕೋಟಿ ಮೀಸಲಿಟ್ಟಿದರೂ, ಅದು ಅರ್ಹರಿಗೆ ತಲುಪಲಿಲ್ಲ. ಈಗ ಇಡೀ ರಾಜ್ಯದ ಪ್ರತಿ ಸಂಘಟನೆಗಳ ಸದಸ್ಯರೂ ಒಕ್ಕೂಟದ ಸದಸ್ಯರಾಗುವ ಮೂಲಕ ವಿತರಕರ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕಿದೆ’ ಎಂದು ಹೇಳಿದರು.

‘ಕೇಂದ್ರ ಸರ್ಕಾರ ನೀಡುವ ಇ–ಶ್ರಮ ಗುರುತಿನ ಚೀಟಿ ಪಡೆಯಲು ಪತ್ರಿಕಾ ವಿತರಕರು ತಮ್ಮ ಹೆಸರುಗಳನ್ನು ಸೇರಿಸಬೇಕು’ ಎಂದು ಸಲಹೆ ನೀಡಿದರು.

ಧಾರವಾಡ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಶಿವು ಹಲಗಿ, ಹುಬ್ಬಳ್ಳಿ ಸಂಘದ ಅಧ್ಯಕ್ಷ ಪಿ.ಎಸ್. ಹಿರೇಮಠ, ಗೋವಿಂದ ಶಿರಗುಪ್ಪಿ, ನಾಗರಾಜ ಕುಲಕರ್ಣಿ, ಚಂದ್ರಶಖರ ಬೇಲೂರ, ಕೃಷ್ಣ ಕುಲಕರ್ಣಿ, ಬಸವರಾಜ ಗೋಂದಿ, ವೆಂಕಟೇಶ ಮೊದಲಿಯಾರ್, ಮಂಜು ಹಿರೇಮಠ ಇದ್ದರು. ಹಾವೇರಿ, ಶಿಗ್ಗಾವಿ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರಿನ ಸಂಘಗಳ ಸದಸ್ಯರು ಭಾಗವಹಿಸಿದ್ದರು.

‘ರಾಜ್ಯದಲ್ಲಿ ಅಸಂಘಟಿತರಾಗಿ ನಿತ್ಯ ದುಡಿಯುತ್ತಿರುವ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿಗೆ ಸರ್ಕಾರ ನಿಗಮ ಸ್ಥಾಪಿಸಬೇಕು’ ಎಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ. ಶಂಭುಲಿಂಗ ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT