ಹಾವೇರಿ ಜಿಲ್ಲೆಯ ಹಾನಗಲ್ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಸಿ.ಆರ್. ಬಳ್ಳಾರಿ ಅವರನ್ನು ಉಮೇದುವಾರಿಕೆಯಿಂದ ಹಿಂತೆಗೆದುಕೊಳ್ಳುವಂತೆ ಮಾಡಲು ದಾವಣಗೆರೆಯಲ್ಲಿ ಕಸರತ್ತು ನಡೆದಿದೆ. ಸ್ವತಃ ಮುಖ್ಯಮಂತ್ರಿಯವರೇ ದಾವಣಗೆರೆಗೆ ಬಂದಿದ್ದಲ್ಲದೇ ಬಂಡಾಯ ಅಭ್ಯರ್ಥಿಯನ್ನು, ಪಂಚಮಸಾಲಿ ಸಮಾಜದ ಮುಖಂಡರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ.