ಉಜಿರೆ: ಪ್ರಧಾನಿ ನರೇಂದ್ರ ಮೋದಿ ಅವರ ಆರೋಗ್ಯ ಮತ್ತು ಆಯುಷ್ಯ ವೃದ್ಧಿಗಾಗಿ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಸೋಮವಾರ ಮೃತ್ಯುಂಜಯ ಹೋಮ ನಡೆಯಿತು.

ಸುರತ್ಕಲ್‌ನ ನಾಗೇಂದ್ರ ಭಾರದ್ವಾಜ್ ಪ್ರಧಾನ ಪೌರೋಹಿತ್ಯದಲ್ಲಿ ಏಳು ಕುಂಡಗಳಲ್ಲಿ ನಡೆದ ಹೋಮದಲ್ಲಿ 108 ಅರ್ಚಕರು ಭಾಗವಹಿಸಿದರು. ಬೆಳ್ತಂಗಡಿ ತಾಲ್ಲೂಕಿನ ಜನತೆಯ ಪರವಾಗಿ ಶಾಸಕ ಹರೀಶ್ ಪೂಂಜ ಮೃತ್ಯುಂಜಯ ಹೋಮ ಆಯೋಜಿಸಿದ್ದರು.

ಬೆಳಿಗ್ಗೆ ಆರಂಭವಾದ ಮೃತ್ಯುಂಜಯ ಹೋಮ, ಚತುರ್ವೇದ ಪಾರಾಯಣ, ಗೋಪೂಜೆ ಮತ್ತು ಮಹಾಗಣಪತಿ ಹೋಮದ ಬಳಿಕ ಮಧ್ಯಾಹ್ನ ಮಹಾಮಂಗಳಾರತಿ, ಪೂರ್ಣಾಹುತಿಯೊಂದಿಗೆ ಸಮಾಪನಗೊಂಡಿತು.

ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ‘ಪ್ರಧಾನಿಯವರ ಆಯುಷ್ಯ ಮತ್ತು ಆರೋಗ್ಯ ವೃದ್ಧಿಯಾಗಿ, ಸಕಲ ಸನ್ಮಂಗಲ ಉಂಟಾಗಲಿ. ಶಾಸಕ ಹರೀಶ್ ಪೂಂಜ ಮತ್ತು ಡಾ.ಸ್ವೀಕೃತಿ ದಂಪತಿ ದೆಹಲಿಗೆ ತೆರಳಿ ನರೇಂದ್ರ ಮೋದಿ ಅವರಿಗೆ ಮೃತ್ಯುಂಜಯ ಹೋಮದ ಪ್ರಸಾದ ನೀಡಲಿದ್ದಾರೆ’ ಎಂದು ಹೇಳಿದರು.

ಸಚಿವರಾದ ಕೆ.ಎಸ್. ಈಶ್ವರಪ್ಪ, ಶಶಿಕಲಾ ಜೊಲ್ಲೆ, ಸಿ.ಸಿ.ಪಾಟೀಲ್ ಮತ್ತು ಎಸ್.ಅಂಗಾರ, ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಧರ್ಮಸ್ಥಳದ ಹೇಮಾವತಿ ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹಷೇಂದ್ರ ಕುಮಾರ್, ಶ್ರೇಯಸ್ ಕುಮಾರ್ ಮತ್ತು ನಿಶ್ಚಲ್ ಕುಮಾರ್ ಉಪಸ್ಥಿತರಿದ್ದರು.

ಸುರತ್ಕಲ್‌ನ ನಾಗೇಂದ್ರ ಭಾರದ್ವಾಜ್ ಪ್ರಧಾನ ಪೌರೋಹಿತ್ಯದಲ್ಲಿ ಏಳು ಕುಂಡಗಳಲ್ಲಿ ನಡೆದ ಹೋಮದಲ್ಲಿ 108 ಅರ್ಚಕರು ಭಾಗವಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.