ಪ್ರಜಾವಾಣಿ ವಾರ್ತೆ ಹೊಸದುರ್ಗ: ಕೆಡಿಪಿ ಸಭೆಗಳು ತಾಲ್ಲೂಕು ಆಡಳಿತಕ್ಕೆ ಸಂಬಂಧಪಟ್ಟ ವಿಷಯಗಳು. ಇಲ್ಲಿ ಯಾವುದೇ ಶಿಷ್ಟಾಚಾರ ಇಲ್ಲ. ಆಹ್ವಾನಿತರಲ್ಲದವರಿಗೆ ಪ್ರವೇಶವಿಲ್ಲ. ಅನ್ಯರ ದರ್ಪ, ದಬ್ಬಾಳಿಕೆಗೆ ಎದೆಗುಂದದೇ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದರು. ಇಲಾಖಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.