ಬೆಂಗಳೂರು: ಕೊಲೆ, ಕೊಲೆ ಯತ್ನ, ಡಕಾಯಿತಿಗೆ ಸಿದ್ಧತೆ, ಅಪಹರಣ, ಕಳವು, ಜೀವ ಬೆದರಿಕೆ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಅಮೀರ್ ಖಾನ್ ಯಾನೆ ಪಪ್ಪು (36) ಎಂಬಾತನನ್ನು ಪೊಲೀಸರು ಒಂದು ವರ್ಷ ಗಡಿಪಾರು ಮಾಡಿದ್ದಾರೆ.

ಶಿವಾಜಿನಗರದ ರೌಡಿ ಕೋಳಿ ಫಯಾಜ್‌ನ ಮಗನಾಗಿರುವ ಅಮೀರ್ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ 22 ಗಂಭೀರ ಪ್ರಕರಣಗಳಿವೆ.

‘ಈತನಿಂದ ಅನೇಕರಿಗೆ ಜೀವ ಬೆದರಿಕೆ ಇದೆ. ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೂ ಹಾನಿಯುಂಟುಮಾಡುವ ಸಾಧ್ಯತೆ ಇದೆ. ಕಾನೂನಿನ ಭಯವಿಲ್ಲದೇ ಈತ ನಿರಂತರವಾಗಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ. ಹೀಗಾಗಿ ನಗರದಿಂದ ಒಂದು ವರ್ಷ ಗಡಿಪಾರು ಮಾಡುವಂತೆ ಪೂರ್ವ ವಿಭಾಗದ ಎಸಿಪಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅವರು ಅಮೀರ್‌ನನ್ನು ಗಡಿಪಾರು ಮಾಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಹಲಸೂರಿನ ಕಾರ್ತಿಕ್ ಯಾನೆ ರಾಹುಲ್, ಕಮರ್ಷಿಯಲ್ ಸ್ಟ್ರೀಟ್‌ನ ಮೊಹಮ್ಮದ್ ಅವೇಜ್, ಜೀವನ್‌ಬಿಮಾ ನಗರದ ಜೋಶ್ವಾ ಎಂಬಾತನನ್ನೂ ಗಡಿಪಾರು ಮಾಡಲಾಗಿತ್ತು.

ಕೊಲೆ, ಕೊಲೆ ಯತ್ನ, ಡಕಾಯಿತಿಗೆ ಸಿದ್ಧತೆ, ಅಪಹರಣ, ಕಳವು, ಜೀವ ಬೆದರಿಕೆ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಅಮೀರ್ ಖಾನ್ ಯಾನೆ ಪಪ್ಪು (36) ಎಂಬಾತನನ್ನು ಪೊಲೀಸರು ಒಂದು ವರ್ಷ ಗಡಿಪಾರು ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.