ಬೆಂಗಳೂರು: ‘ಇನ್‌ಸ್ಟಾಗ್ರಾಮ್’ ಮೂಲಕ ಯುವತಿಯೊಬ್ಬರನ್ನು ಪರಿಚಯಿಸಿಕೊಂಡು ಅವರ ಅರೆನಗ್ನ ಫೋಟೊ ಹಾಗೂ ವಿಡಿಯೊ ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದ್ದು, ಈ ಬಗ್ಗೆ ಬಸವನಗುಡಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬನಶಂಕರಿ ನಿವಾಸಿಯಾಗಿರುವ 21 ವರ್ಷದ ಯುವತಿ ದೂರು ನೀಡಿದ್ದಾರೆ. ಆರೋಪಿ ಚಿರಾಗ್ ಹಾಗೂ ಆತನ ಸ್ನೇಹಿತ ಹರ್ಷಿತ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.'

‘ಸಂತ್ರಸ್ತ ಯುವತಿ, ಇನ್‌ಸ್ಟಾಗ್ರಾಮ್‌ನಲ್ಲಿ ಖಾತೆ ಹೊಂದಿದ್ದಾರೆ. ಅದೇ ಖಾತೆ ಮೂಲಕ 2020ರಲ್ಲಿ ಅವರಿಗೆ ಆರೋಪಿ ಚಿರಾಗ್ ಪರಿಚಯವಾಗಿತ್ತು. ಇಬ್ಬರ ನಡುವೆ ಸ್ನೇಹ ಏರ್ಪಟ್ಟು, ಮೊಬೈಲ್ ನಂಬರ್ ಸಹ ವಿನಿಮಯ ಮಾಡಿಕೊಂಡಿದ್ದರು. ನಂತರ, ಚಾಟಿಂಗ್ ಮಾಡಲಾರಂಭಿಸಿದ್ದರು. ದಿನ ಕಳೆದಂತೆ ಸಲುಗೆಯೂ ಬೆಳೆದಿತ್ತು.’

‘ತನ್ನ ಪೋಷಕರು ಮೈಸೂರಿನಲ್ಲಿರುವುದಾಗಿ ಹೇಳಿದ್ದ ಚಿರಾಗ್, ಅವರನ್ನು ಪರಿಚಯ ಮಾಡಿಸುವುದಾಗಿ ಹೇಳಿದ್ದ. ಸೆ. 26ರಂದು ಯುವತಿಯನ್ನು ಮೈಸೂರಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿಯೇ ವಸತಿ ಗೃಹವೊಂದರ ಕೊಠಡಿಯಲ್ಲಿ ಇಬ್ಬರೂ ಉಳಿದುಕೊಂಡಿದ್ದರು. ಅದೇ ಕೊಠಡಿಗೆ ಇನ್ನೊಬ್ಬ ಆರೋಪಿ ಹರ್ಷಿತ್ ಸಹ ಬಂದಿದ್ದ’ ಎಂದೂ ತಿಳಿಸಿವೆ.

‘ಪಾನೀಯದಲ್ಲಿ ಮತ್ತು ಬರುವ ಔಷಧಿ ಬೆರೆಸಿ ಯುವತಿಗೆ ಕುಡಿಸಿದ್ದ ಆರೋಪಿಗಳು, ಅವರು ಪ್ರಜ್ಞೆ ತಪ್ಪುತ್ತಿದ್ದಂತೆ ಬಟ್ಟೆಗಳನ್ನು ಬಿಚ್ಚಿದ್ದರು. ಅರೆನಗ್ನವಾಗಿದ್ದ ಯುವತಿಯ ಫೋಟೊ ಹಾಗೂ ವಿಡಿಯೊ ಚಿತ್ರೀಕರಿಸಿಕೊಂಡಿದ್ದರು. ಅದೇ ಫೋಟೊ ಹಾಗೂ ವಿಡಿಯೊವನ್ನು ಯುವತಿಗೆ ತೋರಿಸಿದ್ದ ಆರೋಪಿಗಳು, ₹ 5 ಲಕ್ಷ ಹಣಕ್ಕೆ ಬೇಡಿಕೆ ಇರಿಸಿದ್ದರು. ಹಣ ನೀಡದಿದ್ದರೆ, ಫೋಟೊ ಹಾಗೂ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸಿದ್ದರು’ ಎಂದೂ ಮೂಲಗಳು ಹೇಳಿವೆ.

ಮೆಜೆಸ್ಟಿಕ್ ವಸತಿಗೃಹದಲ್ಲಿ ಅಕ್ರಮ ಬಂಧನ: ‘ಯುವತಿಯನ್ನು ಮೆಜೆಸ್ಟಿಕ್ ಬಳಿ ಕರೆಸಿಕೊಂಡಿದ್ದ ಆರೋಪಿಗಳು, ವಸತಿಗೃಹವೊಂದರ ಕೊಠಡಿಯಲ್ಲಿ ಅಕ್ರಮ ಬಂಧನದಲ್ಲಿರಿಸಿದ್ದರು. ಈ ಬಗ್ಗೆಯೂ ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

‘ಇನ್‌ಸ್ಟಾಗ್ರಾಮ್’ ಮೂಲಕ ಯುವತಿಯೊಬ್ಬರನ್ನು ಪರಿಚಯಿಸಿಕೊಂಡು ಅವರ ಅರೆನಗ್ನ ಫೋಟೊ ಹಾಗೂ ವಿಡಿಯೊ ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದ್ದು, ಈ ಬಗ್ಗೆ ಬಸವನಗುಡಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.