ಬೆಂಗಳೂರು: ನಗರದಲ್ಲಿ ಕೋವಿಡ್ ಹಾಗೂ ಓಮೈಕ್ರಾನ್ ಪ್ರಕರಣಗಳು ಏರುಗತಿಯಲ್ಲಿವೆ. ಕೋವಿಡ್ ನಿಯಂತ್ರಣಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸು ಧರಿಸುವುದನ್ನು ಕಡ್ಡಾಯಗೊಳಿಸಿರುವ ಸರ್ಕಾರ, ಧರಿಸದವರಿಗೆ ದಂಡ ವಿಧಿಸುತ್ತಿದೆ. ಹೀಗಿದ್ದರೂ ನಾಗರಿಕರು ನಿಯಮ ಉಲ್ಲಂಘಿಸುವುದು ಸಾಮಾನ್ಯವಾಗಿದೆ.
ಮಾರುಕಟ್ಟೆ, ಬಸ್ ಹಾಗೂ ರೈಲು
ನಿಲ್ದಾಣ, ಉದ್ಯಾನ, ಮಳಿಗೆಗಳಿಗೆ ಭೇಟಿ
ನೀಡುವವರ ಮೇಲೆ ಬಿಬಿಎಂಪಿ ಮಾರ್ಷಲ್‌ಗಳು ಹದ್ದಿನ ಕಣ್ಣು ಇಟ್ಟಿದ್ದಾರೆ.
ನಗರದಲ್ಲಿ 15 ದಿನಗಳಲ್ಲೇ (ಜ.1 ರಿಂದ 15) ಮುಖಗವಸು ಧರಿಸದ 14,273 ಮಂದಿ ವಿರುದ್ಧ ಪ್ರಕರಣ ದಾಖಲಿಸಿ ₹35.68 ಲಕ್ಷ ದಂಡವನ್ನೂ ಸಂಗ್ರಹಿಸಿದ್ದಾರೆ.