×
ADVERTISEMENT
ಈ ಕ್ಷಣ :
ADVERTISEMENT

ಆರೋಪಗಳು ಯಾರನ್ನೂ ಬಿಟ್ಟಿಲ್ಲ: ರಾಮಲಿಂಗಾ ರೆಡ್ಡಿ

Published : 15 ಅಕ್ಟೋಬರ್ 2021, 19:52 IST
ಫಾಲೋ ಮಾಡಿ
Comments

ಬೆಂಗಳೂರು: ‘ದಕ್ಷ ಹಾಗೂ ಪ್ರಾಮಾಣಿಕರಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪ ಅವರನ್ನೂ ಆರೋಪಗಳು ಬಿಟ್ಟಿರಲಿಲ್ಲ. ಗಾಳಿ ಮಾತಿನ ಚರ್ಚೆಗೆ ಹೆಚ್ಚು ಮಹತ್ವ ನೀಡಬಾರದು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಹೇಳಿದರು.

ಪಕ್ಷದ ಮುಖಂಡರಾದ ಸಲೀಂ ಮತ್ತು ವಿ.ಎಸ್‌. ಉಗ್ರಪ್ಪ ಮಾತನಾಡುವ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿರುದ್ಧ ಲಂಚದ ಆರೋಪ ಮಾಡಿರುವ ಕುರಿತು ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ರಾಜಾಜಿನಗರದಲ್ಲಿರುವ ನಿವೇಶನಗಳೆಲ್ಲ ನಿಜಲಿಂಗಪ್ಪ ಅವರದ್ದು ಎಂದು ಆರೋಪ ಮಾಡುತ್ತಿದ್ದರು. ಆದರೆ, ಅವರು ಇಡೀ ಬೆಂಗಳೂರಿನಲ್ಲಿ ಒಂದು ನಿವೇಶನ ಕೂಡ ಹೊಂದಿರಲಿಲ್ಲ’ ಎಂದರು.

ಕಾಂಗ್ರೆಸ್‌ ನೇತೃತ್ವದ ಸರ್ಕಾರದಲ್ಲಿ ‘ಪರ್ಸೆಂಟೇಜ್‌’ ವ್ಯವಹಾರ ಇರಲಿಲ್ಲ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಶೂನ್ಯ ‘ಪರ್ಸೆಂಟೇಜ್‌’ ಇದ್ದರೆ, ಈಗ ಬಿಜೆಪಿ ಸರ್ಕಾರದಲ್ಲಿ ಶೇಕಡ 20ಕ್ಕೇರಿದೆ. ಸಲೀಂ ಶೇಕಡ 12ರ ‘ಪರ್ಸೆಂಟೇಜ್‌’ ಕುರಿತು ಮಾತನಾಡಿರುವುದು ಶುದ್ಧ ಸುಳ್ಳು ಎಂದು ಹೇಳಿದರು.

‘ದಕ್ಷ ಹಾಗೂ ಪ್ರಾಮಾಣಿಕರಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪ ಅವರನ್ನೂ ಆರೋಪಗಳು ಬಿಟ್ಟಿರಲಿಲ್ಲ. ಗಾಳಿ ಮಾತಿನ ಚರ್ಚೆಗೆ ಹೆಚ್ಚು ಮಹತ್ವ ನೀಡಬಾರದು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT