ಬೆಂಗಳೂರು: ಮೂಳೆ ಮುರಿತದಿಂದ ಸಂಕೀರ್ಣ ಸಮಸ್ಯೆಗೆ ಒಳಗಾಗುವವರಿಗೆ ಸಂಜಯ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯು ‘3ಡಿ ಮುದ್ರಣ ತಂತ್ರಜ್ಞಾನ’ ಆಧಾರಿತ ಅತ್ಯಾಧುನಿಕ ಶಸ್ತ್ರಚಿಕಿತ್ಸೆಯನ್ನು ಪ್ರಾರಂಭಿಸಿದೆ. ಮೂಳೆ ಶಸ್ತ್ರಚಿಕಿತ್ಸೆಗೆ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡ ದೇಶದ ಮೊದಲ ಸರ್ಕಾರಿ ಸಂಸ್ಥೆ ಇದಾಗಿದೆ.