ಹೆಬ್ಬಾಳ: ‘ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಯಾರ ಮಧ್ಯಸ್ಥಿಕೆಯೂ ಇಲ್ಲದೆ ನೇರವಾಗಿ ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ’ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.

ಯಮಕನಮರಡಿ ಮತ ಕ್ಷೇತ್ರದ ವ್ಯಾಪ್ತಿಯ ಮಸರಗುಪ್ಪಿಯಲ್ಲಿ 58, ಕುರಣಿಯಲ್ಲಿ 58, ಅರ್ಜುನವಾಡದಲ್ಲಿ 60, ಪಾಶ್ಚಾಪೂರದಲ್ಲಿ 150, ದಡ್ಡಿ ಗ್ರಾಮದಲ್ಲಿ 120 ಫಲಾನುಭವಿಗಳಿಗೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ಈಚೆಗೆ ವಿತರಿಸಿ ಅವರು ಮಾತನಾಡಿದರು.

‘ಯೋಜನೆಯಲ್ಲಿ ದೇಶದಾದ್ಯಂತ 8 ಕೋಟಿ ಸಿಲಿಂಡರ್‌ಗಳನ್ನು ವಿತರಿಸಲಾಗಿದೆ. ಮುಂಬರುವ ದಿನಗಳಲ್ಲಿ 2 ಕೋಟಿ ಸಿಲಿಂಡರ್ ವಿತರಿಸುವ ಗುರಿ ಸರ್ಕಾರದ್ದಾಗಿದೆ. ಜನಪರ ಯೋಜನೆಗಳು ನೇರವಾಗಿ ತಲುಪುತ್ತಿವೆ. ತಾರತಮ್ಯ ಮಾಡುತ್ತಿಲ್ಲ. ಇದರಿಂದ ಬಡ ಜನರಿಗೆ ಅನುಕೂಲವಾಗಿದೆ’ ಎಂದರು.

ವಿದ್ಯಾನಂದ ಶ್ರೀ, ಮುಖಂಡರಾದ ಶಶಿಕಾಂತ ನಾಯಿಕ, ರವಿಂದ್ರ ಹಂಜಿ, ಮಾರುತಿ ಅಷ್ಠಗಿ, ಪಕ್ಷದ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರಾಜೇಶ ನೇರ್ಲಿ, ಶ್ರೀಶೈಲ ಯಮಕನಮರಡಿ, ಶಂಕರರಾವ ಬಾಂದುರ್ಗೆ, ಅಶೋಕ ಚಂದಪ್ಪಗೋಳ, ಅಮರ ಮಹಾಜನಶೆಟ್ಟಿ, ಬಸವರಾಜ ಅಂಬಿಗೇರ, ಬಸವರಾಜ ಹುಂದ್ರಿ, ಬಸವರಾಜ ಉದೋಶಿ, ಕಲಗೌಡಾ ಪಾಟೀಲ, ದಡ್ಡಿ ಗ್ರಾ.ಪಂ. ಅಧ್ಯಕ್ಷ ಮುನ್ನಾ ಶೇಖ ಇದ್ದರು.

‘ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಯಾರ ಮಧ್ಯಸ್ಥಿಕೆಯೂ ಇಲ್ಲದೆ ನೇರವಾಗಿ ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ’ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.