×
ADVERTISEMENT
ಈ ಕ್ಷಣ :
ADVERTISEMENT

‘ಜನರಿಗೆ ಕೇಂದ್ರದ ಯೋಜನೆ ಮಹಿತಿ ನೀಡಿ’

Published 10 ಜನವರಿ 2024, 12:49 IST
Last Updated 10 ಜನವರಿ 2024, 12:49 IST
Comments
ಅಕ್ಷರ ಗಾತ್ರ

ಹುಕ್ಕೇರಿ: ‘ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳು ದೇಶದಲ್ಲೆಡೆ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, ಅವುಗಳ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸಬೇಕು’ ಎಂದು ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ರಾಚಯ್ಯ ಹಿರೇಮಠ ಹೇಳಿದರು.

ಅವರು ತಾಲ್ಲೂಕಿನ ಘೋಡಗೇರಿಯಲ್ಲಿ ಬುಧವಾರ ನಡೆದ ‘ನಮ್ಮ ಸಂಕಲ್ಪ ವಿಕಸಿತ ಭಾರತ’ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರದ ಯೋಜನೆಗಳ ಸಮರ್ಪಕ ಮಾಹಿತಿ ನೀಡುವುದೇ ನಮ್ಮ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಉದ್ದೇಶ ಎಂದರು.

ಆರೋಗ್ಯ ಇಲಾಖೆಯ ಸಿಬ್ಬಂದಿ ದುಂಡೇಶ ನೊಗನಿಹಾಳ, ವಿಘ್ನೇಶ ಮಾತನಾಡಿದರು. ಫಲಾನುಭವಿ ಕಸ್ತೂರಿ ಭಜಂತ್ರಿ ಉಜ್ವಲಾ ಗ್ಯಾಸ್ ಯೋಜನೆಯ ಕುರಿತು ಮಾತನಾಡಿದರು. ಘೋಡಗೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅರುಂಧತಿ ಮಾದರ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುದ್ರಾ, ಜನಧನ್, ಉಜ್ವಲಾ, ವಿಶ್ವಕರ್ಮ ಮೊದಲಾದ ಕೇಂದ್ರ ಸರ್ಕಾರದ ಯೋಜನೆ ಕುರಿತು ಎಲ್.ಇ.ಡಿ ವಾಹನದ ಮೂಲಕ ಜನರಿಗೆ ಅರಿವು ಮೂಡಿಸಲಾಯಿತು. ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಘೋಡಗೇರಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಶಿವಾನಂದ ಮುಗಳಿ, ಹಿಡಕಲ್ ಡ್ಯಾಂ ಕೆನರಾ ಬ್ಯಾಂಕಿನ ಪ್ರಭಂದಕ ಸಂತೋಷ ತೋಮರ್, ಪಿಕೆಪಿಎಸ್ ಅಧ್ಯಕ್ಷ ಬಾಬು ಅಂಕಲಗಿ, ತುಕಾರಾಮ ಬಸ್ತವಾಡ, ವಿಸ್ತಾರಕ ವಿರೇಶ್ ಗಜಬರ್, ಗ್ರಾಮ ಪಂಚಾಯ್ತಿ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT