ಬೆಳಗಾವಿ: ‘ಸಾಂಬ್ರಾ ಗ್ರಾಮದಲ್ಲಿ 15 ದಿನಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುವುದು’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ತಿಳಿಸಿದರು.

ತಾಲ್ಲೂಕಿನ ಸಾಂಬ್ರಾ ಗ್ರಾಮದಲ್ಲಿ ನವರಾತ್ರಿ ಅಂಗವಾಗಿ ಹಮ್ಮಿಕೊಂಡಿದ್ದ ದುರ್ಗಾದೇವಿ ಮಹಾಪೂಜೆ ಹಾಗೂ ಮಹಾಪ್ರಸಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಗ್ರಾಮದ ಜನರ ಆರೋಗ್ಯದ ದೃಷ್ಟಿಯಿಂದ ತಜ್ಞ ವೈದ್ಯರನ್ನು ಕರೆಯಿಸಿ ಶಿಬಿರ ಆಯೋಜಿಸಲಾಗುವುದು. ಎಲ್ಲ ರೋಗಗಳ ತಜ್ಞ ವೈದ್ಯರನ್ನೂ ಕರೆಯಿಸುತ್ತೇನೆ. ಸಂಪೂರ್ಣ ವೆಚ್ಚವನ್ನು ನಾನೇ ನೋಡಿಕೊಳ್ಳುತ್ತೇನೆ. ಜನರು ಯಾವುದೇ ಸಮಸ್ಯೆಗಳಿದ್ದರೂ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಒಂದು ದಿನ ಕೂಲಿಗೆ ಹೋಗುವುದನ್ನೂ ತಪ್ಪಿಸಿದರೂ ತೊಂದರೆ ಇಲ್ಲ. ಆದರೆ, ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದನ್ನು ಮರೆಯಬೇಡಿ’ ಎಂದರು.

ಗ್ರಾಮದ ಹಿರಿಯರು, ಮುಖಂಡರಾದ ನಾಗೇಶ ದೇಸಾಯಿ, ಸದು ಪಾಟೀಲ, ಶಾಂತಾ ದೇಸಾಯಿ, ಸುಲೋಚನಾ ಜೋಗಾಣಿ, ಶ್ವೇತಾ ಬಾಮನವಾಡಿ, ಸಂತೋಷ ದೇಸಾಯಿ, ಮಹೇಶ ಕುಲಕರ್ಣಿ, ಲಕ್ಷ್ಮಣ ಕೊಳೆಪ್ಪಗೋಳ, ಗುರುನಾಥ ಅಷ್ಟೇಕರ, ಪ್ರವೀಣ ಜಮಖಂಡಿ, ಕೇದಾರ ಧರ್ಮೋಜಿ, ಧನಶ್ರೀ ಚೌಗುಲೆ, ಬಾವುಕಣ್ಣ ಬಸರೀಕಟ್ಟಿ, ಉಲ್ಲಾಸ ಬಾಮನವಾಡಿ, ದೇವಸ್ಥಾನ ಸಮಿತಿಯವರು ಉಪಸ್ಥಿತರಿದ್ದರು.

ಇದೇ ವೇಳೆ ದೇವಾಂಗ ಸಮಾಜದ ಬನಶಂಕರಿ ದೇವಸ್ಥಾನದಲ್ಲಿ ದರ್ಶನ ಪಡೆದ ಶಾಸಕರು ಮುಂಬರುವ ದಿನಗಳಲ್ಲಿ ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಾಣ ಮಾಡಿಕೊಡುವುದಾಗಿ ಸಮಿತಿಯವರಿಗೆ ಭರವಸೆ ನೀಡಿದರು.

‘ಸಾಂಬ್ರಾ ಗ್ರಾಮದಲ್ಲಿ 15 ದಿನಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುವುದು’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.