ಬಳ್ಳಾರಿ: ರೈತರ ಪ್ರತಿಭಟನೆಗಳ ನಡುವೆಯೂ ಬಳ್ಳಾರಿ ಸಮೀಪ ಸ್ವಾಧೀನ
ಪಡಿಸಿಕೊಂಡಿರುವ ಭೂಮಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ರಾಜ್ಯ ಸರ್ಕಾರ ಹತ್ತು ವರ್ಷಗಳ ಹಿಂದೆ (2010ರ ಆಗಸ್ಟ್ನಲ್ಲಿ) ಚೆನ್ನೈ ಮೂಲದ ‘ಮಾರ್ಗ್’ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿತ್ತು. ಈಚೆಗಷ್ಟೇ ಮಂದಗತಿಯಲ್ಲಿ ಆರಂಭವಾಗಿದ್ದ ಕಾಮಗಾರಿ ಎರಡು ಕಂಪನಿಗಳ ನಡುವಿನ ‘ಕಿತ್ತಾಟ’ದಿಂದಾಗಿ ಸ್ಥಗಿತಗೊಂಡಿದೆ.