×
ADVERTISEMENT
ಈ ಕ್ಷಣ :
ADVERTISEMENT

ನರ್ಮದಾ ಕಾಲೇಜಿಗೆ ಶೇ 76, ಮಾತೃಛಾಯ ಶೇ74 ಫಲಿತಾಂಶ

Published : 21 ಏಪ್ರಿಲ್ 2023, 16:29 IST
Last Updated : 21 ಏಪ್ರಿಲ್ 2023, 16:29 IST
ಫಾಲೋ ಮಾಡಿ
Comments

undefined

ಸೇಡಂ: ಪಟ್ಟಣದ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ ಮಾತೃಛಾಯ ಶೇ 74 ಮತ್ತು ನರ್ಮದಾದೇವಿ ಗಿಲಡಾ ಸಂಯುಕ್ತ ಪದವಿ ಪೂರ್ವ ಕಾಲೇಜು ಫಲಿತಾಂಶ ಶೇ 76 ಬಂದಿದೆ ಎಂದು ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಅಧ್ಯಕ್ಷ ಸದಾಶಿವ ಸ್ವಾಮೀಜಿ ತಿಳಿಸಿದ್ದಾರೆ.

ಮಾತೃಛಾಯ ಕಾಲೇಜು: ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ ಮಾತೃಛಾಯ ಕಾಲೇಜಿನ ಕಲಾವಿಭಾಗದಲ್ಲಿ ಅಶ್ವಿನಿ ಭೀಮರಾಯ (95.66), ನೇತ್ರಾ ಶರಣಗೌಡ(93) ಮತ್ತು ಭಾಗ್ಯಶ್ರೀ ನಿಂಬರಗಿ(91.83) ಫಲಿತಾಂಶ ಪಡೆದರೆ, ವಾಣಿಜ್ಯ ವಿಭಾಗದಲ್ಲಿ ಎಂ.ಶಿವಕಾವ್ಯ ಶ್ರೀನಿವಾಸ(95), ಮಹೇಶಕುಮಾರ ಸೋಬಾನ(93) ಮತ್ತು ಸರೋಜಾದೇವಿ ರಾಜಶೇಖರಯ್ಯ(88) ಅಂಕ ಪಡೆದಿದ್ದಾರೆ. ಅಲ್ಲದೆ ಅರ್ಥಶಾಸ್ತ್ರ ವಿಷಯದಲ್ಲಿ ಎಂ.ಶಿವಕಾವ್ಯ, ಲೆಕ್ಕಶಾಸ್ತ್ರ ವಿಷಯದಲ್ಲಿ ಭಾಗ್ಯಶ್ರೀ ಮತ್ತು ಕು.ಪ್ರತಿಭಾ ಪ್ರತಿಶತ ಮತ್ತು ಸಂಖ್ಯಾಶಾಸ್ತ್ರ ವಿಷಯದಲ್ಲಿ ಕು.ಜ್ಞಾನೇಂದ್ರ ಮತ್ತು ಕು.ಆನಂದಿತಾ ಪ್ರತಿಶತ ಅಂಕ ಪಡೆದಿದ್ದಾರೆ.

ಮಾತೃಛಾಯ ಪಿಯು ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಒಟ್ಟು 106 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 71 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 50 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 41 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಾಲೇಜಿನಲ್ಲಿ ಒಟ್ಟಾರೆ 278 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 206 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶಾಲೆಯ ಒಟ್ಟಾರೆ ಫಲಿತಾಂಶ ಶೇ.74.10 ಬಂದಿದೆ.

ನರ್ಮದಾ ಕಾಲೇಜು: ಕೊತ್ತಲ ಬಸವೇಶ್ವರ ಭಾರತೀಯ ಭಾರತೀಯ ಶಿಕ್ಷಣ ಸಮಿತಿಯ ನರ್ಮದಾ ದೇವಿ ಗಿಲಡಾ ಕಾಲೇಜಿನ ಕಲಾ ವಿಭಾಗದಲ್ಲಿ ಭಾನುಬೇಗಂ(91.05), ಸಿಂಧೂ ಮಲ್ಲಿಕಾರ್ಜುನ (91.00), ಸಂಗೀತಾ ಶಿವ್ಯನಾಯಕ(87.83), ಭಾಗ್ಯಶ್ರೀ ಮಲ್ಲಯ್ಯ ಮಠ(87.66), ಭಾಗ್ಯಶ್ರೀ ಲಾಲಪ್ಪ(85.83), ಸಂಗೀತಾ ಚನ್ನಬಸ್ಸಪ್ಪ (85.50) ಅಂಕ ಪಡೆದರೆ, ವಾಣಿಜ್ಯ ವಿಭಾಗದಲ್ಲಿ ಪವಿತ್ರ ಚಂದ್ರಶೇಖರ (90.50), ಶ್ರೇತಾ ಧೂಳಪ್ಪ(86.83) ಮತ್ತು ಶಾರದಾ ರಾಜಶೇಖರ(85.16) ಅಂಕ ಪಡೆದಿದ್ದಾರೆ. ಕಾಲೇಜಿನಲ್ಲಿ ಒಟ್ಟು 135 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 97 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕಲಾ ವಿಭಾಗದಲ್ಲಿ ಶೇ 71, ಶೇ.84.61 ಫಲಿತಾಂಶ ಬಂದಿದೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಗೌರವ ಅಧ್ಯಕ್ಷ ನಾಗರೆಡ್ಡಿ ಪಾಟಿಲ, ಅಧ್ಯಕ್ಷ ಸದಾಶಿವ ಸ್ವಾಮೀಜಿ, ಕಾರ್ಯದರ್ಶಿ ಅನುರಾಧ ಪಾಟೀಲ, ಪ್ರಾಚಾರ್ಯ ಚನ್ನಬಸ್ಸಪ್ಪ ಗವಿ ಮತ್ತು ಕಾಲೇಜಿನ ಉಪನ್ಯಾಸಕ ಬಳಗ ಮತ್ತು ಸರ್ವ ಸಿಬ್ಬಂದಿ ಬಳಗ ಹರ್ಷ ವ್ಯಕ್ತಪಡಿಸಿದ್ದಾರೆ.

ನೇತ್ರಾ ಶರಣಗೌಡ
ನೇತ್ರಾ ಶರಣಗೌಡ
ಭಾಗ್ಯಶ್ರೀ ನಿಂಬರಗಿ
ಭಾಗ್ಯಶ್ರೀ ನಿಂಬರಗಿ
ಎಮ್ ಶಿವಕಾವ್ಯ
ಎಮ್ ಶಿವಕಾವ್ಯ
ಮಹೇಶಕುಮಾರ
ಮಹೇಶಕುಮಾರ
ಬಾನುಬೇಗಂ
ಬಾನುಬೇಗಂ
ಸಿಂಧು ಮಲ್ಲಿಕಾರ್ಜುನ
ಸಿಂಧು ಮಲ್ಲಿಕಾರ್ಜುನ

Quote - ದ್ವಿತೀಯ ಪಿಯು ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಅಂಕಗಳ ಜತೆಗೆ ಮುಂದಿನ ಅವರ ಭವಿಷ್ಯ ಉಜ್ವಲಗೊಳ್ಳಲಿ ಸದಾಶಿವ ಸ್ವಾಮೀಜಿ ಅಧ್ಯಕ್ಷರು ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT