ಬೆಂಗಳೂರು: ಟಾಟಾ ಮೋಟರ್ಸ್ ಅನಾವರಣ ಮಾಡಿರುವ ‘ಪಂಚ್’ ಕಾರು ವಯಸ್ಕ ಪ್ರಯಾಣಿಕರ ಸುರಕ್ಷತೆಯ ಮಾನದಂಡಗಳಲ್ಲಿ 5–ಸ್ಟಾರ್ ಶ್ರೇಯಾಂಕ ಪಡೆದಿದೆ ಎಂದು ಕಂಪನಿ ಹೇಳಿದೆ.

ಕಾರಿನಲ್ಲಿ ಮಕ್ಕಳು ಕುಳಿತಿದ್ದರೆ, ಅವರ ಸುರಕ್ಷತೆಗೆ ಗ್ಲೋಬಲ್ ಎನ್‌ಸಿಎಪಿ 4–ಸ್ಟಾರ್ ಶ್ರೇಯಾಂಕ ನೀಡಿದೆ. ಆಲ್ಟ್ರೋಜ್ ಮತ್ತು ನೆಕ್ಸಾನ್ ನಂತರ ಈ ಶ್ರೇಯಾಂಕ ಪಡೆದಿರುವ, ಟಾಟಾ ಮೋಟರ್ಸ್‌ನ ಮೂರನೆಯ ಮಾದರಿ ಇದು.

ಪಂಚ್ ಕಾರು ಸಬ್–ಕಾಂಪ್ಯಾಕ್ಟ್ ಎಸ್‌ಯುವಿ ಎಂದು ಕಂಪನಿಯು ಹೇಳಿಕೊಂಡಿದೆ. ‘ಭಾರತದಲ್ಲಿನ ಅತ್ಯಂತ ಸುರಕ್ಷಿತ ವಾಹನಗಳಲ್ಲಿ ಒಂದು ಎಂದು ಕರೆಸಿಕೊಳ್ಳುವ ಪಂಚ್ ವಿನ್ಯಾಸವು ನಮ್ಮಲ್ಲಿ ಹೆಮ್ಮೆ ಮೂಡಿಸಿದೆ’ ಎಂದು ಟಾಟಾ ಮೋಟರ್ಸ್‌ನ ಪ್ರಯಾಣಿಕ ವಾಹನಗಳ ವಿಭಾಗದ ಅಧ್ಯಕ್ಷ ಶೈಲೇಶ್ ಚಂದ್ರ ಹೇಳಿದ್ದಾರೆ.

ಪಂಚ್ ಕಾರಿನ ಬುಕಿಂಗ್ ಈಗಾಗಲೇ ಆರಂಭ ಆಗಿದೆ. ಈ ಕಾರಿನ ಬೆಲೆಯನ್ನು ಕಂಪನಿಯು ಸೋಮವಾರ ಪ್ರಕಟಿಸುವ ನಿರೀಕ್ಷೆ ಇದೆ.

ಟಾಟಾ ಮೋಟರ್ಸ್ ಅನಾವರಣ ಮಾಡಿರುವ ‘ಪಂಚ್’ ಕಾರು ವಯಸ್ಕ ಪ್ರಯಾಣಿಕರ ಸುರಕ್ಷತೆಯ ಮಾನದಂಡಗಳಲ್ಲಿ 5–ಸ್ಟಾರ್ ಶ್ರೇಯಾಂಕ ಪಡೆದಿದೆ ಎಂದು ಕಂಪನಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.