ಬೆಂಗಳೂರು: ಈವಿ ಟ್ರಾನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಮುಂಬೈ – ಪುಣೆ ನಡುವೆ ‘ಪುರಿ ಬಸ್’ (Puri Bus) ಹೆಸರಿನಲ್ಲಿ ವಿದ್ಯುತ್ ಚಾಲಿತ ಬಸ್ ಸಂಚಾರ ಆರಂಭಿಸಲಿದೆ.

ವಿಜಯ ದಶಮಿಯ ದಿನದಿಂದ (ಅಕ್ಟೋಬರ್ 15) ಈ ಬಸ್ ಸೇವೆ ಶುರುವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ. ‘ಪುರಿ ಬಸ್‌ಗಳು ಒಂದು ಬಾರಿ ಚಾರ್ಜ್ ಆದರೆ 350 ಕಿ.ಮೀ. ದೂರವನ್ನು ಕ್ರಮಿಸಬಲ್ಲವು’ ಎಂದು ಈವಿ ಟ್ರಾನ್ಸ್ ಕಾರ್ಯನಿರ್ವಾಹಕ ವ್ಯವಸ್ಥಾಪಕ ಸಂದೀಪ್ ರೈಜಾದ ತಿಳಿಸಿದ್ದಾರೆ.

12 ಮೀಟರ್ ಉದ್ದದ ಪುರಿ ಬಸ್‌ಗಳಲ್ಲಿ ಚಾಲಕ ಮತ್ತು ಒಬ್ಬ ಸಿಬ್ಬಂದಿಯನ್ನು ಹೊರತುಪಡಿಸಿ ಒಂದು ಬಾರಿಗೆ 45 ಜನ ಕುಳಿತುಕೊಳ್ಳಬಹುದು. ಹವಾನಿಯಂತ್ರಣ ವ್ಯವಸ್ಥೆ ಕೂಡ ಈ ಬಸ್‌ಗಳಲ್ಲಿ ಇರಲಿದೆ. ಪ್ರತಿ ಆಸನಕ್ಕೂ ಯುಎಸ್‌ಬಿ ಚಾರ್ಜಿಂಗ್ ಸೌಲಭ್ಯ ಇರಲಿದೆ.

‘ಈಗಿನ ಪರಿಸ್ಥಿತಿಯಲ್ಲಿ ದೂರ ಪ್ರಯಾಣಕ್ಕೆ ಬಳಕೆಯಲ್ಲಿರುವ ಡೀಸೆಲ್ ಚಾಲಿತ ವಾಹನಗಳಿಗೆ ಹೋಲಿಕೆ ಮಾಡಿದರೆ, ಈ ಬಸ್ ಪ್ರಯಾಣವು ಅಗ್ಗದ್ದು. ನಿರ್ವಹಣಾ ವೆಚ್ಚ ಕೂಡ ಕಡಿಮೆ’ ಎಂದು ಕಂಪನಿ ಹೇಳಿದೆ.

ಈವಿ ಟ್ರಾನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಮುಂಬೈ – ಪುಣೆ ನಡುವೆ ‘ಪುರಿ ಬಸ್’ (Puri Bus) ಹೆಸರಿನಲ್ಲಿ ವಿದ್ಯುತ್ ಚಾಲಿತ ಬಸ್ ಸಂಚಾರ ಆರಂಭಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.