×
ADVERTISEMENT
ಈ ಕ್ಷಣ :
ADVERTISEMENT

ಕಾರ್‌ದೇಖೊ ಈಗ ಯೂನಿಕಾರ್ನ್‌

Published : 13 ಅಕ್ಟೋಬರ್ 2021, 17:01 IST
ಫಾಲೋ ಮಾಡಿ
Comments

ಬೆಂಗಳೂರು: ಕಾರುಗಳ ಬಗ್ಗೆ ಮಾಹಿತಿ ನೀಡುವ ಆನ್‌ಲೈನ್‌ ವೇದಿಕೆ ಕಾರ್‌ದೇಖೊ ಹೊಸದಾಗಿ ₹ 1,882 ಕೋಟಿ ಬಂಡವಾಳ ಸಂಗ್ರಹಿಸಿರುವುದಾಗಿ ಹೇಳಿದೆ. ಈ ಬಂಡವಾಳ ಸಂಗ್ರಹ ಮೂಲಕ ಕಂಪನಿಯ ಮಾರುಕಟ್ಟೆ ಮೌಲ್ಯವು ₹ 9 ಸಾವಿರ ಕೋಟಿಯನ್ನು ದಾಟಿದ್ದು, ದೇಶದ ಯೂನಿಕಾರ್ನ್‌ಗಳ ಪಟ್ಟಿಗೆ ಸೇರಿದೆ.

ಯೂನಿಕಾರ್ನ್‌ ಪಟ್ಟಿಗೆ ಸೇರಿದ, ರಾಜಸ್ಥಾನದ ಜೈಪುರದ ಮೊದಲ ಕಂಪನಿ ಇದು. ಈಗ ಸಂಗ್ರಹವಾಗಿರುವ ಬಂಡವಾಳವನ್ನು ಕಂಪನಿಯ ಬೆಳವಣಿಗೆಗೆ ಬಳಸಿಕೊಳ್ಳಲಾಗುವುದು. ಅದರಲ್ಲೂ ಮುಖ್ಯವಾಗಿ ಸೆಕೆಂಡ್‌ಹ್ಯಾಂಡ್‌ ಕಾರು ವಹಿವಾಟು, ಹಣಕಾಸಿನ ಸೇವೆಗಳು ಮತ್ತು ವಿಮೆ, ಹೊಸ ಮಾರುಕಟ್ಟೆಗಳ ಕಡೆ ಗಮನ ಹರಿಸಲು ಇದನ್ನು ಬಳಸಿಕೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಕಂಪನಿಯು ಈಗ 100ಕ್ಕೂ ಹೆಚ್ಚಿನ ಮಾರುಕಟ್ಟೆಗಳಿಂದ ಹಳೆಯ ಕಾರುಗಳನ್ನು ಖರೀದಿಸುತ್ತಿದೆ. ಕಾರ್‌ದೇಖೊ ಕಂಪನಿಯು ಆರಂಭಿಕ ಸಾರ್ವಜನಿಕ ಹೂಡಿಕೆ (ಐಪಿಒ) ಮೂಲಕ ತನ್ನ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸುವ ಉದ್ದೇಶ ಹೊಂದಿದೆ.

ಕಾರುಗಳ ಬಗ್ಗೆ ಮಾಹಿತಿ ನೀಡುವ ಆನ್‌ಲೈನ್‌ ವೇದಿಕೆ ಕಾರ್‌ದೇಖೊ ಹೊಸದಾಗಿ ₹ 1,882 ಕೋಟಿ ಬಂಡವಾಳ ಸಂಗ್ರಹಿಸಿರುವುದಾಗಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT