ಸುಂದರವಾದ ಬಣ್ಣ ಬಣ್ಣದ ಟೋಪಿ, ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸುವ ಮಪ್ಲರ್, ಶ್ರಗ್ ಇವೆಲ್ಲಾ ಕ್ರೋಶಾ ಕಡ್ಡಿಯಿಂದ ಹೆಣೆದರೆ ಎಷ್ಟು ಚೆಂದ ಅಲ್ವಾ? ಈ ಕ್ರೋಶಾ ಕಡ್ಡಿಯ ಸಹಾಯದಿಂದ ನೂಲಿನಿಂದ ಹೆಣೆದು ಮಾಡಿರುವ ಉಡುಪುಗಳನ್ನು ಈಗ ಹೆಂಗಳೆಯರು ಹೆಚ್ಚು ಇಷ್ಟಪಡುತ್ತಿದ್ದಾರೆ. ಇವು ಎಲ್ಲಾ ಕಾಲದಲ್ಲೂ ಧರಿಸಲು ಸೂಕ್ತ ಎನ್ನಿಸಿದರೂ ಚಳಿಗಾಲದಲ್ಲಿ ಮೈಯನ್ನು ಬೆಚ್ಚಗಿಸಿರುವ ಜೊತೆಗೆ ಅಂದವನ್ನೂ ಹೆಚ್ಚಿಸುತ್ತವೆ. ಈ ಕ್ರೋಶಾ ಕಡ್ಡಿಯಿಂದ ಹೆಣೆದ ಕೆಲವು ಉಡುಪುಗಳು ಈಗ ಫ್ಯಾಷನ್ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿವೆ.

ಟೋಪಿಗಳು
ಹಿಂದೆಲ್ಲಾ ಚಿಕ್ಕ ಮಕ್ಕಳಿಗೆ ತೊಡಿಸಲು ತಾಯಂದಿರು ಟೋಪಿ, ಕೈಗವಸುಗಳನ್ನು ಹೆಣೆಯುತ್ತಿದ್ದರು. ಮಕ್ಕಳಿಗೆ ಲಾಲಿ ಹಾಡುತ್ತಾ ಕ್ರೋಶಾ ಕಡ್ಡಿಯಿಂದ ಸುಂದರವಾದ ನೇಯ್ಗೆಯ ಟೋಪಿ, ಅಂಗಿ ಹೆಣೆಯುತ್ತಾ ನಿದ್ದೆ ಮಾಡಿಸುತ್ತಿದ್ದರು. ಈಗ ಇದೇ ಕ್ರೋಶಾ ಕಡ್ಡಿಯಿಂದ ಹೆಣೆದ ಟೋಪಿಯನ್ನು ಹೆಣ್ಣುಮಕ್ಕಳು ಚಳಿಗಾಲದಲ್ಲಿ ಧರಿಸಲು ಇಷ್ಟ ಪಡುತ್ತಿದ್ದಾರೆ. ಬಣ್ಣ ಬಣ್ಣದ ಟೋಪಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇವು ಚಳಿಯಿಂದ ರಕ್ಷಿಸುವ ಜೊತೆಗೆ ಅಂದವನ್ನೂ ಹೆಚ್ಚಿಸುತ್ತವೆ.

ಮಫ್ಲರ್ (ಮುಫ್ಲರ್)
ಚಳಿಗಾಲದಲ್ಲಿ ಮಫ್ಲರ್‌ಗಳು ಹುಡುಗಿಯರ ಕತ್ತನ್ನು ಅಲಂಕರಿಸಿರುತ್ತವೆ. ಇವುಗಳನ್ನು ಕುರ್ತಾ ಟಾಪ್, ಜೀನ್ಸ್ ಟಾಪ್, ಸೀರೆ ಹೀಗೆ ಎಲ್ಲದರ ಜೊತೆಗೂ ಧರಿಸಬಹುದು. ವಿವಿಧ ವಿನ್ಯಾಸ ಹಾಗೂ ಬಣ್ಣದಲ್ಲೂ ಮಫ್ಲರ್‌ಗಳು ಸಿಗುತ್ತವೆ. ಟೋಪಿಯೊಂದಿಗೆ ಸೇರಿ ಬರುವ ಮಫ್ಲರ್ ಸದ್ಯದ ಟ್ರೆಂಡ್. ಚಳಿಗಾಲದ ಸಮಯದಲ್ಲಿ ಪ್ರಯಾಣಕ್ಕೆ ಇವು ಹೆಚ್ಚು ಹೊಂದುತ್ತವೆ. ಇದನ್ನು ಸ್ಕರ್ಟ್–ಬ್ಲೌಸ್ ಜೊತೆಗೂ ಧರಿಸಬಹುದು. ಆ ಮೂಲಕ ಅಂದ ಹೆಚ್ಚುವುದರೊಂದಿಗೆ ಚಳಿಯಿಂದ ದೇಹವನ್ನು ರಕ್ಷಿಸಿಕೊಳ್ಳಬಹುದು.

ಶ್ರಗ್
ಕ್ರೋಶಾ ಕಡ್ಡಿಯಿಂದ ಹೆಣೆದ ಶ್ರಗ್ ಅಥವಾ ಓವರ್‌ಕೋಟ್‌ಗಳು ಹಿಂದೆಲ್ಲಾ ವಸ್ತು ಪ್ರದರ್ಶನಗಳಲ್ಲಿ ಹೆಚ್ಚು ಕಾಣ ಸಿಗುತ್ತಿದ್ದವು. ಉತ್ತರ ಭಾರತದ ಕಡೆಯವರು ಹೆಚ್ಚು ಧರಿಸುತ್ತಿದ್ದ ಈ ಶ್ರಗ್‌ಗಳನ್ನು ಈಗ ದಕ್ಷಿಣ ಮಂದಿಯೂ ಮೆಚ್ಚಿ ಧರಿಸುತ್ತಿದ್ದಾರೆ. ಇದನ್ನು ಕುರ್ತಾ ಟಾಪ್, ಸೀರೆ, ಜೀನ್ಸ್ ಟಾಪ್ ಎಲ್ಲದರ ಮೇಲೂ ಧರಿಸಬಹುದು. ಮೊದಲೆಲ್ಲಾ ಬಿಳಿ, ಕ್ರೀಮ್ ಬಣ್ಣದ ಶ್ರಗ್‌ಗಳೇ ಹೆಚ್ಚು ಸದ್ದು ಮಾಡುತ್ತಿದ್ದವು. ಆದರೆ ಈಗೀಗ ಎಲ್ಲಾ ಬಣ್ಣದ ಡೈಡ್ (ಟೈ ಅಂಡ್ ಡೈ) ಶ್ರಗ್ ಕೂಡ ಹೆಣ್ಣುಮಕ್ಕಳ ಅಂದವನ್ನು ಹೆಚ್ಚಿಸುತ್ತಿವೆ.

ಬ್ಯಾಗ್‌ಗಳು
ಕ್ರೋಶಾ ಕಡ್ಡಿಯಿಂದ ಹೆಣೆಯುವ ವಿವಿಧ ವಿನ್ಯಾಸ ಹಾಗೂ ಆಕಾರದ ಬ್ಯಾಗ್‌ಗಳು ಕೂಡ ಫ್ಯಾಷನ್ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ಈ ಬ್ಯಾಗ್‌ಗಳನ್ನು ಸಾಂಪ್ರದಾಯಿಕ ಹಾಗೂ ಪಾಶ್ಚಾತ್ಯ ಹೀಗೆ ಎಲ್ಲಾ ಥರದ ಉಡುಪುಗಳೊಂದಿಗೂ ಧರಿಸಬಹುದು. ಉಡುಪಿಗೆ ಹೊಂದುವ ಬಣ್ಣದ ಬ್ಯಾಗ್‌ಗಳನ್ನೂ ಕೂಡ ಧರಿಸಬಹುದು.

ಕೈಗವಸು
ಚಳಿಗಾಲದಲ್ಲಿ ಬೆಚ್ಚಗಿರಿಸುವ ಕೈಗವಸು ಹಾಗೂ ಶೂಗಳು ಈಗ ಹೆಚ್ಚು ಚಾಲ್ತಿಯಲ್ಲಿವೆ. ಒಂದೇ ಬಣ್ಣದ್ದು, ಬಣ್ಣ ಬಣ್ಣದ ನೂಲಿನಿಂದ ನೇಯ್ಗೆ ಮಾಡಿದ್ದು.. ಹೀಗೆ ಚೆಂದದ ಶೂ, ಕೈಗವಸು ಅಂದ ಹೆಚ್ಚಿಸುವುದರಲ್ಲಿ ಸಂಶಯವಿಲ್ಲ.

ಟಾಪ್‌ಗಳು
ಕ್ರೋಶಾ ಟೀ ಶರ್ಟ್, ಟಾಪ್‌ಗಳು ಈಗ ಫ್ಯಾಷನ್ ಮಾರುಕಟ್ಟೆಯಲ್ಲಿ ಹೆಚ್ಚು ಗಮನ ಸೆಳೆಯುತ್ತಿವೆ. ಇವು ಸಡಿಲವಾಗಿದ್ದು ಧರಿಸಲು ಆರಾಮದಾಯಕ ಎನ್ನಿಸುತ್ತವೆ. ಇದರೊಂದಿಗೆ ಕ್ರೋಶಾ ಕಿವಿಯೋಲೆಗಳನ್ನು ಧರಿಸಬಹುದು. ಉದ್ದನೆಯ ಸಿಂಗಲ್ ಟಾಪ್, ಜೀನ್ಸ್ ಟಾಪ್, ಕುರ್ತಾ ಟಾಪ್‌ಗಳು ಈಗ ಹೆಣ್ಣಮಕ್ಕಳ ಸೌಂದರ್ಯಕ್ಕೆ ಇನ್ನಷ್ಟು ರಂಗು ತರುತ್ತಿವೆ.

ಸುಂದರವಾದ ಬಣ್ಣ ಬಣ್ಣದ ಟೋಪಿ, ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸುವ ಮಪ್ಲರ್, ಶ್ರಗ್ ಇವೆಲ್ಲಾ ಕ್ರೋಶಾ ಕಡ್ಡಿಯಿಂದ ಹೆಣೆದರೆ ಎಷ್ಟು ಚೆಂದ ಅಲ್ವಾ? ಈ ಕ್ರೋಶಾ ಕಡ್ಡಿಯ ಸಹಾಯದಿಂದ ನೂಲಿನಿಂದ ಹೆಣೆದು ಮಾಡಿರುವ ಉಡುಪುಗಳನ್ನು ಈಗ ಹೆಂಗಳೆಯರು ಹೆಚ್ಚು ಇಷ್ಟಪಡುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.