ಬೆಂಗಳೂರು: ಟೊಯೊಟಾ ಕಿರ್ಲೋಸ್ಕರ್ ಮೋಟರ್ (ಟಿಕೆಎಂ) ಕಂಪನಿಯು ತನ್ನ ಜನಪ್ರಿಯ ಎಸ್ಯುವಿಗಳಲ್ಲಿ ಒಂದಾಗಿರುವ ಲೆಜೆಂಡರ್ನ 4X4 ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಲೆಜೆಂಡರ್ ವಾಹನವನ್ನು 2021ರ ಜನವರಿಯಲ್ಲಿ ಮೊದಲು 4X2 ಆವೃತ್ತಿಯಲ್ಲಿ, ಹೊಸ ಫಾರ್ಚೂನರ್ ಎಸ್ಯುವಿ ಜೊತೆ ಬಿಡುಗಡೆ ಮಾಡಲಾಗಿತ್ತು. ಹೆಡ್ಲ್ಯಾಂಪ್ಗಳಲ್ಲಿ ಸ್ಪ್ಲಿಟ್ ಕ್ವಾಡ್ ಎಲ್ಇಡಿ ಇದ್ದು, ವಾಟರ್ ಫಾಲ್ ಎಲ್ಇಡಿ ಸೌಲಭ್ಯ ಇರಲಿದೆ.

ಒಳಭಾಗದಲ್ಲಿ, ಡ್ಯುಯಲ್ ಟೋನ್ ಇಂಟೀರಿಯರ್ ಥೀಮ್, ಸ್ಟೀರಿಂಗ್ ವೀಲ್ ಮತ್ತು ಕನ್ಸೋಲ್ ಬಾಕ್ಸ್ಗಾಗಿ ಕಾಂಟ್ರಾಸ್ಟ್ ಸ್ಟಿಚಿಂಗ್, ಹಿಂಭಾಗದ ಆಸನಗಳಿಗೆ ಯುಎಸ್ಬಿ ಪೋರ್ಟ್ ಇರುತ್ತವೆ.

ಹೊಸ ಲೆಜೆಂಡರ್ ಆವೃತ್ತಿಯ ಬಿಡುಗಡೆ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಟಿಕೆಎಂ ಕಂಪನಿಯ ಮಾರಾಟ ವಿಭಾಗದ ಸಹಾಯಕ ವ್ಯವಸ್ಥಾಪಕ ನಿರ್ದೇಶಕ ವಿ. ವೈಸ್ಲೈನ್ ಸಿಗಾಮಣಿ ಅವರು, ‘ನಮ್ಮ ಗ್ರಾಹಕರ ಆಕಾಂಕ್ಷೆಗಳನ್ನು ಪೂರೈಸಲು ಹೊಸ ಉತ್ಪನ್ನಗಳನ್ನು ತರುತ್ತೇವೆ. ಆಫ್-ರೋಡಿಂಗ್ ಮತ್ತು ಸಿಟಿ ಡ್ರೈವಿಂಗ್ ಸಾಮರ್ಥ್ಯಗಳಿಂದ ಗ್ರಾಹಕರು ಖುಷಿಪಡುತ್ತಾರೆ ಎಂದು ನಾವು ಭರವಸೆ ಹೊಂದಿದ್ದೇವೆ’ ಎಂದು ಹೇಳಿದ್ದಾರೆ.

ಹೊಸ ಲೆಜೆಂಡರ್ 4x4 ಆವೃತ್ತಿಯ ಬುಕಿಂಗ್ ಶುರುವಾಗಿದೆ. ಗ್ರಾಹಕರು www.toyotabharat.com/online-booking ಮೂಲಕವೂ ಬುಕ್ ಮಾಡಬಹುದು.

ಟೊಯೊಟಾ ಕಿರ್ಲೋಸ್ಕರ್ ಮೋಟರ್ (ಟಿಕೆಎಂ) ಕಂಪನಿಯು ತನ್ನ ಜನಪ್ರಿಯ ಎಸ್ಯುವಿಗಳಲ್ಲಿ ಒಂದಾಗಿರುವ ಲೆಜೆಂಡರ್ನ 4X4 ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.