×
ADVERTISEMENT
ಈ ಕ್ಷಣ :

ಬಿ.ಎನ್.ಮಲ್ಲೇಶ್

ಸಂಪರ್ಕ:
ADVERTISEMENT

ಚುರುಮುರಿ: ಕನ್ನಡ ಪರೀಕ್ಷೆ

‘ಗುರೂ... ನಾನೂ ಕನ್ನಡ ಸಾಹಿತ್ಯ ಪರಿಷತ್ ಮೆಂಬರಾಗಬೇಕು ಅಂತಿದೀನಿ... ಆದ್ರೆ ಅದೇನೋ ಪರೀಕ್ಷೆ ಮಾಡ್ತಾರಂತೆ?’ ತೆಪರೇಸಿಯನ್ನು ಗುಡ್ಡೆ ವಿಚಾರಿಸಿದ. ‘ಹೌದಂತೆ, ಸಿಂಪಲ್ ಪ್ರಶ್ನೆ ಕೇಳ್ತಾರಂತೆ. ಉದಾಹರಣೆಗೆ, ಈಗ ಕನ್ನಡದಲ್ಲಿ ಎಷ್ಟು ಅಕ್ಷರ ಅದಾವೆ?’ ತೆಪರೇಸಿ ಕೇಳಿದ. ‘ನಾನು ಓದೋವಾಗ ಐವತ್ತೋ ಐವತ್ತೆಲ್ಡೋ ಇದ್ವು. ಈಗ ಎಲ್ಲ ರೇಟಾಗಿದಾವೆ, ಅವೂ ಜಾಸ್ತಿಯಾಗಿರಬೇಕು’. ‘ನಿನ್ತೆಲಿ, ಹೋಗ್ಲಿ ನಿಂಗೆ ಈ ಸಂಧಿ ಸಮಾಸ ಗೊತ್ತಾ?’ ‘ಸಮೋಸ ಗೊತ್ತು, ಅದೆ ಆಲೂಗಡ್ಡೆ ಹಾಕಿ ಮಾಡ್ತಾರಲ್ಲ. ಆದ್ರೆ ಈ ಸಂದಿ ಅಂದ್ರೆ ಏನು? ಮನೆ ಅಕ್ಕಪಕ್ಕ ಇರ‍್ತಾವಲ್ಲ ಅವಾ?’ ‘ಥೂ ನಿನ್ನ, ಈಗ ಅದು ಬಿಡು... ಮದ್ಯಪಾನದಲ್ಲಿ ‘ದ್ಯ’ ಅಲ್ಪಪ್ರಾಣನೋ ಮಹಾಪ್ರಾಣನೋ?’
Last Updated 20 ಜನವರಿ 2022, 18:54 IST
ಚುರುಮುರಿ: ಕನ್ನಡ ಪರೀಕ್ಷೆ
ADVERTISEMENT
ADVERTISEMENT
ADVERTISEMENT
ADVERTISEMENT