ಬೆಂಗಳೂರು: ಯಕ್ಷಗಾನದ ಮುಖವರ್ಣಿಕೆ, ವೇಷಭೂಷಣದ ಪ್ರಾತ್ಯಕ್ಷಿಕೆ ಮತ್ತು ಪ್ರಾಯೋಗಿಕ ಪ್ರದರ್ಶನ ನಗರದ ಉದಯಭಾನು ಕಲಾಸಂಘದಲ್ಲಿ ಇತ್ತೀಚೆಗೆ ನಡೆಯಿತು.

ನಗರದ ‘ಕರ್ನಾಟಕ ಮಹಿಳಾ ಯಕ್ಷಗಾನ ಸಂಸ್ಥೆ’ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಆಕರ್ಷಕ ಮುಖವರ್ಣಿಕೆ, ಚಿತ್ತಾರ ಬಿಡಿಸಲಾಯಿತು. ಕೆಲವು ಮಕ್ಕಳು ತಾವೇ ಮುಖವರ್ಣಿಕೆ ಬಿಡಿಸಲು ಪ್ರಯತ್ನಿಸಿದರು. ತರಬೇತುದಾರರೂ ನೆರವಾದರು. ಬಣ್ಣಗಳ ಪರಿಚಯ, ಸಂಯೋಜನೆ, ಮಿಶ್ರಣ ಪದಾರ್ಥಗಳು ಇತ್ಯಾದಿ ವಿವರಗಳನ್ನು ಹೇಳುತ್ತಲೇ ಮಕ್ಕಳನ್ನು ಪಕ್ಕಾ ಯಕ್ಷ ಪಾತ್ರಧಾರಿಗಳನ್ನಾಗಿ ರೂಪಿಸಲಾಯಿತು.

ಯಕ್ಷಗಾನ ಗುರುಗಳಾದ ಕೆ. ಗೌರಿ ಅವರ ನೇತೃತ್ವದಲ್ಲಿ ಮಕ್ಕಳಿಂದ ‘ಪಾಂಡವಾಶ್ವಮೇಧ’ ಎಂಬ ಯಕ್ಷಗಾನದ ಪ್ರಾತ್ಯಕ್ಷಿಕೆ ನಡೆಯಿತು.

ಕೋವಿಡ್ ಅಡ್ಡಿ ಸೀಮಿತ ಪ್ರದರ್ಶನ: ಕೋವಿಡ್ ನಿಯಮಗಳ ಕಾರಣ ಸೀಮಿತ ಅತಿಥಿಗಳ ಸಮ್ಮುಖದಲ್ಲಿ ಯಕ್ಷಗಾನ ಪ್ರದರ್ಶಿಸಲಾಯಿತು. ವಿಡಿಯೋ ಅವತರಣಿಕೆಯನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ಸಂಘಟಕರು ತಿಳಿಸಿದರು.

ಛಾಯಾಗ್ರಾಹಕ ನಾಗೇಶ್ ಪೊಳಲಿ, ಸಂಪನ್ಮೂಲ ವ್ಯಕ್ತಿಗಳಾದ ಮಟ್ಟಿ ರಾಮಚಂದ್ರ ರಾವ್, ರಾಜೇಶ್ ಆಚಾರ್, ಸುರೇಶ್ ಆಚಾರ್ ಇದ್ದರು. ಭಾಗವತರಾಗಿ ವಿನಯ್ ಶೆಟ್ಟಿ, ಮೃದಂಗದಲ್ಲಿ ರಾಘವೇಂದ್ರ ಬಿಡುವಾಳ, ಗೌತಮ್ ಮತ್ತು ಚಂಡೆಯಲ್ಲಿ ನರಸಿಂಹ ಆಚಾರ್ ಇದ್ದರು.

ಆಶಾ ರಾಘವೇಂದ್ರ, ಲತಾ ರಮೇಶ್, ಶಶಿಕಲಾ, ಅನಿತಾ ರಾವ್, ಚಂದ್ರಿಕಾ ಧರ್ಮೇಂದ್ರ, ಚೈತ್ರ ರಾಜೇಶ್ ಕೋಟ, ಸುಮಾ ಅನಿಲ್ ಕುಮಾರ್, ಶರ್ವಾಣಿ ಹೆಗಡೆ, ದೀಕ್ಷಾ ಭಟ್, ಮಾನ್ಯ, ಬಾಲಗೋಪಾಲಕರಾಗಿ ಧೃತಿ ಅಮ್ಮೆಂಬಳ ಹಾಗೂ ರಮ್ಯಾ ಪ್ರದರ್ಶನದಲ್ಲಿ ಭಾಗವಹಿಸಿದ್ದರು.

ಯಕ್ಷಗಾನದ ಮುಖವರ್ಣಿಕೆ, ವೇಷಭೂಷಣದ ಪ್ರಾತ್ಯಕ್ಷಿಕೆ ಮತ್ತು ಪ್ರಾಯೋಗಿಕ ಪ್ರದರ್ಶನ ನಗರದ ಉದಯಭಾನು ಕಲಾಸಂಘದಲ್ಲಿ ಇತ್ತೀಚೆಗೆ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.