ಹುಡುಗಿಯರು ಅಂದ ಮೇಲೆ ಯಾರಿಗೆ ಒಡವೆ ಇಷ್ಟ ಆಗುವುದಿಲ್ಲ ಹೇಳಿ! ಹೊಸ ಬಟ್ಟೆ ಬೀರು ಸೇರಿದರೆ, ಅದಕ್ಕೆ ಹೊಂದುವ ಆಭರಣಗಳೂ ಕೋಣೆ ಸೇರುತ್ತವೆ, ಅದಕ್ಕೆ ಹೊಂದಿಕೆಯಾಗುವ ಸರ, ಬಳೆ, ಕಿವಿಯೋಲೆ ಮುಂತಾದವು. ಹೀಗೆ ಕೋಣೆ ಸೇರಿದ ಒಡವೆಗಳನ್ನು ಸರಿಯಾಗಿ ಇಡುವುದೇ ಒಂದು ದೊಡ್ಡ ಕೆಲಸ.
ಸರ, ಕಿವಿಯೋಲೆ ಒಂದರೊಳಗೆ ಒಂದು ಸೇರಿ, ಅದನ್ನು ಬಿಡಿಸುವುದು ಒಂದೊಪ್ಪತ್ತಿನ ಕೆಲಸವಾಗಿ ಬಿಡುತ್ತದೆ. ಎಲ್ಲವನ್ನೂ ಒಂದೆಡೆ ಇಟ್ಟು ಇಟ್ಟು ಬೇಕಾಗಿದ್ದು, ಬೇಡದ್ದು ಸೇರಿ, ಬೇಕಾದ ತಕ್ಷಣ ಕೈಗೇ ಸಿಗುವುದಿಲ್ಲ ಎನ್ನುವಂಥ ಪರಿಸ್ಥಿತಿ. ಹಾಗಾದರೆ, ಹೇಗೆ ಇವನೆಲ್ಲಾ ಪೇರಿಸಿ, ಅಂದವಾಗಿ ಜೋಡಿಸುವುದು? ಇಲ್ಲಿವೆ ಕೆಲವು ಸಲಹೆಗಳು...
ಮೊದಲ ಹಂತ: ನಮ್ಮ ಹತ್ತಿರ ಇರುವ ಸರ, ಬ್ರೇಸ್ಲೆಟ್ಸ್, ಕಿವಿಯೋಲೆ, ಉಂಗುರಗಳು ಹೀಗೆ ಎಲ್ಲವನ್ನು ಬೇರೆ ಬೇರೆ ಮಾಡಿ ಇಟ್ಟುಕೊಳ್ಳಬೇಕು. ಇವುಗಳಲ್ಲೂ ಮತ್ತೊಂದು ವಿಭಾಗ ಮಾಡಿಕೊಳ್ಳಬಹುದು. ಉದಾಹರಣೆಗೆ– ಕಿವಿಯ ಸ್ಟಡ್‌ಗಳು ಒಂದೆಡೆ, ತೂಗುವ ಕಿವಿಯಾಭರಣಗಳು ಇನ್ನೊಂದೆಡೆ.
ಎರಡನೇ ಹಂತ: ನಿಮ್ಮ ಒಡವೆಗಳಲ್ಲಿ ಯಾವುದು ಸುಸ್ಥಿತಿಯಲ್ಲಿ ಇದೆಯೊ ಅದನ್ನು ಒಂದೆಡೆ, ದುರಸ್ತಿ ಆಗಬೇಕಿರುವುದನ್ನು ಇನ್ನೊಂದು ಕಡೆ ಇಡಿ. ಜೊತೆಗೆ ಯಾವುದನ್ನು ಪದೇ ಪದೇ ಬಳಸುತ್ತೇವೆ, ಕೆಲವು ಸಂದರ್ಭದಲ್ಲಿ ಮಾತ್ರ ಬಳಸುತ್ತೇವೆ ಎನ್ನುವುದನ್ನು ಬೇರೆಯದೇ ವಿಭಾಗ ಮಾಡಿಕೊಳ್ಳಿ. ಯಾವುದನ್ನಾದರೂ ಪಾಲಿಷ್ ಮಾಡಿಸಬೇಕು, ರಿಪೇರಿ ಮಾಡಿಸಬೇಕು ಎಂದಿದ್ದರೆ ಜೋಡಿಸಿ ಇಡುವ ಮೊದಲೇ ಅದನ್ನು ಮಾಡಿಸಿಕೊಂಡೇ ಸೇರಿಸಿ ಇಡುವುದು ಉತ್ತಮ.
ಮೂರನೇ ಹಂತ: ಇಷ್ಟೆಲ್ಲಾ ವಿಭಾಗ ಮಾಡಿಕೊಂಡ ಬಳಿಕ ಅವನ್ನು ಹೇಗೆ ಪೇರಿಸಿ ಇಡಬೇಕು ಎನ್ನುವುದು ವ್ಯಕ್ತಿಯ ಅಭಿರುಚಿಗೆ ಬಿಟ್ಟದ್ದು. ಜೊತೆಗೆ, ನಮ್ಮ ಬಳಿ ಎಷ್ಟೆಲ್ಲಾ ಆಭರಣಗಳು ಇವೆ, ಅದನ್ನು ಹೇಗೆ ನಮ್ಮ ಅನುಕೂಲಕ್ಕೆ ತಕ್ಕ ಹಾಗೆ ಜೋಡಿಸಿಕೊಳ್ಳಬೇಕು ಎನ್ನುವುದು ನಮ್ಮ ಆಯ್ಕೆ.
ಇಷ್ಟೆಲ್ಲಾ ಜೋಡಿಸಿಕೊಂಡ ಮೇಲೆ ಅವುಗಳನ್ನು ಎಲ್ಲಿಡಬೇಕು ಎನ್ನುವುದು ಮುಂದಿರುವ ಪ್ರಶ್ನೆ.
ಡ್ರಾವರ್‌ನಲ್ಲಿ ಅಥವಾ ಟೇಬಲ್ ಮೇಲೆ ಎಲ್ಲಾದರೂ ಜೋಡಿಸಿ ಇರಿಸಿಕೊಳ್ಳಬಹುದು. ಡ್ರಾವರ್‌ನಲ್ಲಿ ವಿಭಾಗಗಳು ಇರುವ ವೆಲ್ವೆಟ್ ಬಟ್ಟೆ ಹೊಂದಿಸಿದ ಟ್ರೇಗಳಲ್ಲಿ ಒಡವೆಗಳನ್ನು ಇಡಬಹುದು. ಈ ಟ್ರೇಗಳು ವಿವಿಧ ಮಾದರಿಯಲ್ಲಿ ಸಿಗುತ್ತವೆ. ಬೇರೆ ಬೇರೆ ಅಳತೆಗಳಲ್ಲೂ ಸಿಗುತ್ತವೆ.
ಇಂಥ ಟ್ರೇ ಇಲ್ಲವೇ ಪ್ಲಾಸ್ಟಿಕ್ ಟ್ರೇಗಳಲ್ಲೂ ಒಡವೆಗಳನ್ನು ಇಡಬಹುದು. ಆದರೆ, ತುಂಬಾ ಸೂಕ್ಷ್ಮವಾದ ಆಭರಣಗಳನ್ನು ಇರಿಸುವುದು ಸೂಕ್ತವಲ್ಲ.
ಡ್ರಾವರ್ ಇಲ್ಲದಿದ್ದರೆ, ಟೇಬಲ್ ಅಥವಾ ಕೌಂಟರ್‌ನ ಮೇಲೆ ಒಡವೆಗಳನ್ನು ಸೇರಿಸಿಡಬೇಕು ಎಂದುಕೊಂಡಿದ್ದರೆ ಲಂಬವಾಗಿ ಇಡಬೇಕಾಗುತ್ತದೆ. ಕಡಿಮೆ ಎತ್ತರವಿರುವ ಸ್ಟ್ಯಾಂಡ್‌ಗಳನ್ನು ಉಪಯೋಗಿಸಬೇಕಾಗುತ್ತದೆ. ನಾನಾ ವಿನ್ಯಾಸದ ಈ ರೀತಿಯ ಸ್ಟ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಅನುಕೂಲಕ್ಕೆ ತಕ್ಕ ಹಾಗೆ, ನಮ್ಮ ಇಷ್ಟಕ್ಕೆ ತಕ್ಕ ಹಾಗೆ ಬಣ್ಣ, ಅಳತೆಯ ರ‍್ಯಾಕ್‌ಗಳನ್ನು ಕೊಳ್ಳಬಹುದು.
ಸರ, ಕಿವಿಯೋಲೆ ಒಂದರೊಳಗೆ ಒಂದು ಸೇರಿ, ಅದನ್ನು ಬಿಡಿಸುವುದು ಒಂದೊಪ್ಪತ್ತಿನ ಕೆಲಸವಾಗಿ ಬಿಡುತ್ತದೆ. ಎಲ್ಲವನ್ನೂ ಒಂದೆಡೆ ಇಟ್ಟು ಇಟ್ಟು ಬೇಕಾಗಿದ್ದು, ಬೇಡದ್ದು ಸೇರಿ, ಬೇಕಾದ ತಕ್ಷಣ ಕೈಗೇ ಸಿಗುವುದಿಲ್ಲ ಎನ್ನುವಂಥ ಪರಿಸ್ಥಿತಿ. ಹಾಗಾದರೆ, ಹೇಗೆ ಇವನೆಲ್ಲಾ ಪೇರಿಸಿ, ಅಂದವಾಗಿ ಜೋಡಿಸುವುದು? ಇಲ್ಲಿವೆ ಕೆಲವು ಸಲಹೆಗಳು...
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.