ADVERTISEMENT

ವಿಶ್ವದ ಅತ್ಯಂತ ಕುಳ್ಳ ಬಾಡಿಬಿಲ್ಡರ್‌ ಪ್ರತೀಕ್ ವಿವಾಹ: ವಧು ಯಾರು ಗೊತ್ತೆ?

ಪೃಥ್ವಿರಾಜ್ ಎಂ.ಎಚ್.
Published 19 ಫೆಬ್ರುವರಿ 2024, 10:35 IST
Last Updated 19 ಫೆಬ್ರುವರಿ 2024, 10:35 IST
ಅತ್ಯಂತ ವೇಗವಾಗಿ ಓಡುವುದಕ್ಕೆ ಚೀತಾ ಹೆಸರುವಾಸಿಯಾಗಿದೆ.
ಅತ್ಯಂತ ವೇಗವಾಗಿ ಓಡುವುದಕ್ಕೆ ಚೀತಾ ಹೆಸರುವಾಸಿಯಾಗಿದೆ.    

ನವದೆಹಲಿ: ವಿಶ್ವದ ಅತ್ಯಂತ ಕುಳ್ಳಗಿನ ಬಾಡಿಬಿಲ್ಡರ್ ಪ್ರತೀಕ್ ವಿಠ್ಠಲ್ ಮೋಹಿತೆ 4 ಅಡಿ ಎತ್ತರವಿರುವ ಜಯಾ ಎಂಬುವರನ್ನು ವಿವಾಹವಾಗಿದ್ದಾರೆ.

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ವಿವಾಹದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಪ್ರತೀಕ್ ಅವರು 2021ರಲ್ಲಿ ವಿಶ್ವದ ಅತ್ಯಂತ ಕುಳ್ಳ ಬಾಡಿಬಿಲ್ಡರ್(ಪುರುಷ) ಪ್ರಶಸ್ತಿ ಪಡೆದಿದ್ದಾರೆ. ಅವರ ಹೆಸರು ಗಿನ್ನಿಸ್‌ ಪುಸ್ತಕದಲ್ಲೂ ದಾಖಲಾಗಿದೆ. 

ADVERTISEMENT

ಮಹಾರಾಷ್ಟ್ರ ಮೂಲದ ಪ್ರತೀಕ್‌, ನಾಲ್ಕು ವರ್ಷಗಳ ಹಿಂದೆ ಜಯಾ ಅವರನ್ನು ಭೇಟಿಯಾಗಿದ್ದರು. ಕೆಲ ತಿಂಗಳುಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಮದುವೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಪ್ರತೀಕ್‌ ಮದುವೆಯ ಫೋಟೊಗಳು ಹಾಗೂ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. 

2012ರಲ್ಲಿ ಪ್ರತೀಕ್ ದೇಹದಾರ್ಢ್ಯ ತರಬೇತಿಯನ್ನು ಆರಂಭಿಸಿದರು. 2016ರಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿದರು. 2021ರಲ್ಲಿ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.