ಬೆಂಗಳೂರು: ಹೊರ ದೇಶಗಳಲ್ಲಿ ನಂದಿನಿ ಹಾಲು ಲಭ್ಯವಿದೆ, ಬೆಂಗಳೂರಿನ ನಂದಿನಿ ಮಿಲ್ಕ್ ಪಾರ್ಲರ್ ಗಳಲ್ಲಿ ಲಭ್ಯವಿಲ್ಲ!
ಹೌದು, ದೇಶ- ವಿದೇಶಗಳಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಲಭ್ಯವಾಗುತ್ತಿದ್ದರೆ, ಸ್ಥಳೀಯವಾಗಿ ಹಾಲಿನ ಕೊರತೆಯನ್ನು ಗ್ರಾಹಕರು ಎದುರಿಸುವಂತಾಗಿದೆ.
ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಸೇರಿ ವಿವಿಧ ದೇಶಗಳಲ್ಲಿ ಸಿಗುತ್ತವೆ. ಪ್ರಮುಖವಾಗಿ ಸಿಂಗಪುರ ಮತ್ತು ಮಧ್ಯಪ್ರಾಚ್ಯ ದೇಶಗಳಿಗೆ ನಂದಿನಿ ಹಾಲಿನ ಉತ್ಪನ್ನಗಳು ಪೂರೈಕೆಯಾಗುತ್ತಿವೆ.
ಕೋವಿಡ್ ನಂತರ ಹೈನುಗಾರಿಕೆ ಹೆಚ್ಚಾಗಿ ಹಾಲು ಶೇಖರಣೆ ಪ್ರಮಾಣವೂ ಏರಿಕೆಯಾಗಿತ್ತು. ದಿನಕ್ಕೆ 96 ಲಕ್ಷ ಕೆ.ಜಿ ತನಕವೂ ಹಾಲು ಸಂಗ್ರಹವಾದ ದಾಖಲೆಯನ್ನು ಕೆಎಂಎಫ್ ಬರೆದಿತ್ತು. ಲಭ್ಯವಿದ್ದ ಹಾಲಿನ ಪ್ರಮಾಣಕ್ಕೆ ತಕ್ಕಂತೆ ಮಾರುಕಟ್ಟೆಯನ್ನು ಕೆಎಂಎಫ್ ವಿಸ್ತರಣೆ ಮಾಡಿಕೊಂಡಿದೆ. ಹಾಲಿನ ಪುಡಿ, ಐಸ್‌ಕ್ರೀಮ್, ಚೀಸ್, ಬೆಣ್ಣೆ, ತುಪ್ಪ, ಸಿಹಿ ತಿನಿಸು ತಯಾರಿಕೆಯನ್ನೂ ಹೆಚ್ಚಳ ಮಾಡಿಕೊಂಡಿದೆ. ಶಾಲಾ ಮಕ್ಕಳಿಗೆ, ಮಿಲಿಟರಿ ಕ್ಯಾಂಪ್‌ಗಳಿಗೆ ಗುಡ್‌ಲೈಫ್ ಹಾಲು ಪೂರೈಕೆಯಾಗುತ್ತಿದೆ.
ಈಗ ಹಾಲು ಸಂಗ್ರಹ ಪ್ರಮಾಣ ಸರಾಸರಿ 76 ಲಕ್ಷ ಕೆ.ಜಿಗೆ ಇಳಿಕೆಯಾಗಿದೆ. 20 ಲಕ್ಷ ಕೆ.ಜಿ ಹಾಲು ಕಡಿಮೆಯಾಗಿದ್ದು, ವ್ಯತ್ಯಯಕ್ಕೆ ಕಾರಣವಾಗಿದೆ.
‘ನಂದಿನಿ ಪಾರ್ಲರ್‌ಗಳಲ್ಲಿ ತಡವಾಗಿ ಬಂದ ಗ್ರಾಹಕರನ್ನು ವಾಪಸ್ ಕಳುಹಿಸಬೇಕಾದ ಅನಿವಾರ್ಯ ಇದೆ’ ಎಂದು ನಂದಿನಿ ಹಾಲು ವಿತರಕರ ಸಂಘದ ಅಧ್ಯಕ್ಷ ಮಂಜುನಾಥ್ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.