ಮೆಲ್ಬರ್ನ್: ಸರ್ಬಿಯಾದ ಟೆನಿಸ್ ಆಟಗಾರ ನೊವಾಕ್ ಜೊಕೊವಿಚ್, ಲಸಿಕೆ ತಯಾರಿಸುವ ಕಂಪನಿಯಲ್ಲೇ ಶೇ 80ರಷ್ಟು ಷೇರು ಹೊಂದಿದ್ದಾರೆ.
ಲಸಿಕೆ ಹಾಕಿಸಿಕೊಳ್ಳದೆ ಆಸ್ಟ್ರೇಲಿಯಾ ಪ್ರವೇಶಿಸಿ, ವೀಸಾ ರದ್ಧತಿಯಿಂದಾಗಿ ಸುದ್ದಿಯಾಗಿದ್ದ ನೋವಾಕ್ ಮತ್ತು ಅವರ ಪತ್ನಿ ಇಬ್ಬರೂ ಲಸಿಕೆ ಕಂಪನಿಯಲ್ಲಿ ಒಟ್ಟು ಶೇ 80ರಷ್ಟು ಷೇರು ಹೊಂದಿದ್ದಾರೆ.
ಈ ಕುರಿತು ಕ್ವಾಂಟ್‌ಬಯೋರೆಸ್ ಕಂಪನಿಯ ಸಿಇಒ ಮತ್ತು ಬಾಸ್ ಸ್ಪಷ್ಟಪಡಿಸಿದ್ದು, 2020ರ ಜೂನ್‌ನಲ್ಲಿಯೇ ನೊವಾಕ್ ಷೇರು ಖರೀದಿಸಿದ್ದರು. ಆದರೆ ಅದರ ಮೊತ್ತ ಎಷ್ಟು ಎನ್ನುವುದನ್ನು ಕಂಪನಿ ಬಹಿರಂಗಪಡಿಸಿಲ್ಲ.
ಕ್ವಾಂಟ್‌ಬಯೋರೆಸ್ ಕಂಪನಿಯಲ್ಲಿ ನೊವಾಕ್ ಶೇ 40.8 ಮತ್ತು ಅವರ ಪತ್ನಿ ಜೆಲಿನಾ ಶೇ 39.2ರಷ್ಟು ಷೇರು ಹೊಂದಿದ್ದಾರೆ.
ಈ ಕಂಪನಿ ಅಭಿವೃದ್ಧಿಪಡಿಸುತ್ತಿರುವ ಕೋವಿಡ್ ಲಸಿಕೆಯನ್ನು ಬ್ರಿಟನ್‌ನಲ್ಲಿ ಪರಿಶೀಲನೆಗೆ ಒಳಪಡಿಸಲಾಗುತ್ತದೆ.
ನೊವಾಕ್ ಜೊಕೊವಿಚ್ ಲಸಿಕೆ ಮತ್ತು ಆಸ್ಟ್ರೇಲಿಯಾ ಪ್ರಕರಣ ಚರ್ಚೆಗೆ ಕಾರಣವಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.